ನ.23-24 ಪಣೋಲಿಬೈಲಿನಲ್ಲಿ ವಾರ್ಷಿಕ ಕೋಲ
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ನವೆಂಬರ್ 23-24ರ ವರೆಗೆ ವರ್ಷಾವಧಿ ಕೋಲ ನೆರವೇರಲಿದೆ ಎಂದು ಕ್ಷೇತ್ರದ ಆಡಳಿತಾಧಿಕಾರಿ, ತಹಸೀಲ್ದಾರ್ ಆದ ಡಿ.ಅರ್ಚನಾ ಭಟ್ ತಿಳಿಸಿದ್ದಾರೆ.
23ರಂದು ಸಂಜೆ ಕೊಪ್ಪರಿಗೆ ಮುಹೂರ್ತ, ಬಳಿಕ ಕುಣಿತ ಭಜನೆ, ದೀಪ ಪ್ರಜ್ವಲನೆ, ನೃತ್ಯಾರಾಧನೆ ಬಳಿಕ ನಾಟಕ ಕಾರ್ಯಕ್ರಮಗಳು ನಡೆಯಲಿವೆ.
24ರಂದು ಬೆಳಗ್ಗೆ ನವಕ ಕಲಶಪ್ರದಾನ, 12 ತೆಂಗಿನಕಾಯಿ ಗಣಹೋಮ, ನಾಗ ತಂಬಿಲ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಭಜನಾ ಸಂಕೀರ್ತನೆ, ಸಂಜೆ ಪಣೋಲಿಬೈಲು ಶ್ರೀಕೃಷ್ಣ ಮಂದಿರದಲ್ಲಿ ಭಜನಾ ಸಂಕೀರ್ತನೆ ಬಳಿಕ ಮೆರವಣಿಗೆ, ಸ್ಥಳೀಯ ಪ್ರತಿಭೆ ಗಳಿಂದ ಸಾಂಸ್ಕೃತಿಕ ವೈವಿಧ್ಯ, ಗೀತ ಸಾಹಿತ್ಯ ಸಂಭ್ರಮ, ಭಂಡಾರದಮನೆಯಿಂದ ದೈವಗಳ ಭಂಡಾರ ಬರುವುದು, ತುಳು ನಾಟಕ ಬಳಿಕ ರಾತ್ರಿ 12ರಿಂದ ವರ್ಷಾವಧಿ ಕೋಲ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.