ಬಂಟ್ವಾಳ ಆಡಳಿತಸೌಧದಲ್ಲಿ ಭಕ್ತಕನಕದಾಸ ಜಯಂತಿ ಆಚರಣೆ
ಬಂಟ್ವಾಳ :ಇಲ್ಲೊಯ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಮಟ್ಟದ” ಭಕ್ತ ಕನಕದಾಸ ಜಯಂತಿ”ಯನ್ನು ಸೋಮವಾರ ಆಚರಿಸಲಾಯಿತು.

ಉಪತಹಸೀಲ್ದಾರ್ ರಾಜೇಶ್ ನಾಯ್ಕ್ ಅವರುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದಾಸ ಸಾಹಿತ್ಯದ ಮೂಲಕ ಜೀವನ ಪಾಠ ಸಾರಿದವರು ಜಾತಿ,ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಕನಕದಾಸರು ಸಂತವರೇಣ್ಯರುಎಂದು ಹೇಳಿದರು.

ಉಪತಹಸೀಲ್ದಾರ್ ನವೀನ್ ಬೆಂಜನಪದವು ಮಾತಾನಾಡಿ ಭಗವಂತನನ್ನು ಕೂಡ ತನ್ನಷ್ಟಕ್ಕೆ ಸೆಳೆದ ಶ್ರೇಷ್ಠ ನಮ್ಮ ತುಳುನಾಡಿನ ಉಡುಪಿಯಲ್ಲಿ ಕನಕ ಕಿಂಡಿಯ ಮುಖಾಂತರ ಶ್ರೀ ಕೃಷ್ಣನ ದರ್ಶನ ಪಡೆದರು.ನಮಗೆಲ್ಲಾರಿಗೂ ಕೂಡ ಶ್ರೇಷ್ಠ ವಿಚಾರಗಳನ್ನು ದರ್ಶನ ಮಾಡುವಂತ ಅವಕಾಶ ಕನಕ ಜಯಂತಿಯಂದು ಸಿಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಎಂ.ಎನ್ ರವಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಸಹಾಯಕರು
ಉಪಸ್ಥಿತರಿದ್ದರು.