ನಾಗನವಳಚ್ಚಿಲ್ ಮನೆಯಿಂದ ಹೋದವರು ನಾಪತ್ತೆ
ಬಂಟ್ವಾಳ: ಮನೆಯಿಂದ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವುದಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜಿಪಮುನ್ನೂರು ಗ್ರಾಮದ ನಾಗನವಳಚ್ಚಿಲ್ ಮನೆಯ ಉಗ್ಗಪ್ಪ ಪೂಜಾರಿ (70) ನಾಪತ್ತೆಯಾದವರು. ನವೆಂಬರ್ 5ರಂದು 10 ಗಂಟೆಗೆ ಪಾಣೆಮಂಗಳೂರು ಯೂನಿಯನ್ ಬ್ಯಾಂಕ್ ಗೆ ಹೊಗಿ ವೃದ್ದಾಪ್ಯ ವೇತನವನ್ನು ಪಡೆದುಕೊಂಡು ವಾಪಾಸ್ ಮನೆಗೆ ಬಂದು ಬಳಿಕ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಕುರಿತು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ. ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದಂತೆ ಪ್ರಕರಣ ದಾಖಲಾಗಿರುತ್ತದೆ.ಕಾಣೆಯಾದವರು ಕಂಡುಬಂದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯವರು ಕೋರಿದ್ದಾರೆ.