ಬಂಟ್ವಾಳ :ಪಾಣೆಮಂಗಳೂರು ಶ್ರೀ ಶಾರದ ಪ್ರೌಢಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ  ಆಚರಿಸಲಾಯಿತು ಪಾಣೆಮಂಗಳೂರು ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಎನ್ ನರೇಂದ್ರನಾಥ ಕುಡ್ವಾ  ರಾಷ್ಟ್ರಧ್ವಜ ಧ್ವಜಾರೋಹಣ ನೆರವೇರಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಕ್ಷಾ ಮತ್ತು ಬಳಗದವರು ನಾಡಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳೇ ರಚಿಸಿದ ಕರ್ನಾಟಕ ಭೂಪಟಕ್ಕೆ ಸಾಂಕೇತಿಕವಾಗಿ 69 ದೀಪಗಳನ್ನು ಹಚ್ಚುವುದರ ಮೂಲಕ  ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಯಿತು.

 ಸಾಹಿತಿ,ಕವಿ ಜಯಾನಂದ ಪೆರಾಜೆ ಹಾಗೂ ಪಾಣೆಮಂಗಳೂರಿನ ಆಶಾಕಾರ್ಯಕರ್ತೆ ಜ್ಯೋತಿಲಕ್ಷ್ಮಿ ಯವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಜಯಾನಂದ ಪೆರಾಜೆ  ಅವರು ಮಾತನಾಡಿದರು. ನವ್ಯ ಮತ್ತು ಒಳಗದವರು ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದರು.

 ಶಾಲಾ ಸಂಚಾಲಕರಾದ ಡಾ. ಪಿ ವಿಶ್ವನಾಥ ನಾಯಕ್, ಮುಖ್ಯ ಶಿಕ್ಷಕ ಶಿವಪ್ಪ ನಾಯ್ಕ, , ಶಾಲೆಯ ಹಿರಿಯ ಶಿಕ್ಷಕಿ  ಸುಧಾ,  ಶಾಲಾ ನಾಯಕ ಮನ್ವಿತ್ ಸಿ ಪೂಜಾರಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕರಾದ  ಶಿವಪ್ಪ ನಾಯಕ್ ಸ್ವಾಗತಿಸಿ,  ಧನರಾಜ್ ದೊಡ್ಡನೇರಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ  ಶೈಮಾ  ಪ್ರಶಸ್ತಿ ಪತ್ರ ವಾಚಿಸಿದರು. ಖತೀಜತುಲ್ ಸಹಬೀರ ವಂದಿಸಿದರು,ಅಬ್ದುಲ್ ರಾಝಿಕ್ ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *