“ದಸರಾ ಕುಮಾರ್ 2024 ” ಪ್ರಶಸ್ತಿ
ಬಂಟ್ವಾಳ: ಉಚ್ಚಿಲಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ದಸರಾ 2024 ಪ್ರಯುಕ್ತ ನಡೆದ ಕುಸ್ತಿ ಪಂದ್ಯಾಟದಲ್ಲಿ ಮದ್ವಬೀಡು ಗಗನ್ ಸಿ ಶೆಟ್ಟಿ ಅವರು “ದಸರಾ ಕುಮಾರ್ 2024 ” ಪ್ರಶಸ್ತಿ ಮತ್ತು ಬೆಳ್ಳಿ ಗದೆಯನ್ನು ಪಡೆದಿರುತ್ತಾರೆ.
ಇವರು ಪೆರಂಗೋಡಿ ಚಂದ್ರಶೇಖರ್ ಬಿ. ಶೆಟ್ಟಿ ಮತ್ತು ಗೀತಾ ಸಿ. ಶೆಟ್ಟಿ ದಂಪತಿಯ ಪುತ್ರ ಹಾಗೂ ಇವರು ಬೋಳಾರದ ಶಿವಾಜಿ ಫಿಸಿಕಲ್ ಇನ್ಸ್ಟಿಟ್ಯೂಟ್ ನ ಸದಸ್ಯ ಮತ್ತು ಪುರುಷೋತ್ತಮ್ ಗುಜರನ್ ರವರ ಶಿಷ್ಯರಾಗಿದ್ದಾರೆ.