ಬಂಟ್ವಾಳ ತಾಲೂಕುಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ :ಮಾತನಾಡಿದರಷ್ಟೇ ಭಾಷೆ ಉಳಿವು ಸಾಧ್ಯ; ಅಂಕಿತಾ
ಬಂಟ್ವಾಳ: ಬಂಟ್ವಾಳ ತಾಲೂಕುಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಶುಕ್ರವಾರ ಬಿ.ಸಿ.ರೋಡಿನಲ್ಲಿರುವ ತಾಲೂಕಾಡಳಿತ ಕಚೇರಿ ಮುಂಭಾಗ ಸಂಭ್ರಮದಿಂದ ನಡೆಯಿತು.ಪ್ರಭಾರ ತಹಶೀಲ್ದಾರ್ ಅರವಿಂದ ಕೆ.ಎಂ. ಧ್ವಜಾರೋಹಣಗೈದು ಶುಭಸಂದೇಶ ನೀಡಿದರು.

ಈಸಂದರ್ಭದಲ್ಲಿ ಪೊಲೀಸ್,ಗೃಹರಕ್ಷಕದಳ,ಎನ್ ಸಿ.ಸಿ.,ವಿವಿಧಶಾಲಾಮಕ್ಕಳಿಂದ ಆಕರ್ಷಕ ಪಥಸಂಚಲನವು ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ,ಬೂಡಾ ಅಧ್ಯಕ್ಷ ಬೇಬಿಕುಂದರ್ ಸಹಿತ ಗಣ್ಯರು ಧ್ವಜವಂದನೆ ಸ್ವೀಕರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿಶಾಸಕ ರಾಜೇಶ್‌ನಾಯ್ಕ್ ಉಳಿಪಾಡಿ ಅವರು ಶುಭಸಂದೇಶ ನೀಡಿದರು.
ದಿಕ್ಸೂಚಿ ಭಾಷಣಗೈದ ವಾಮದಪದವು ಹೈಸ್ಕೂಲ್ ವಿದ್ಯಾರ್ಥಿನಿ ಅಂಕಿತಾ,ಮಾತನಾಡಿದರಷ್ಟೇ ಭಾಷೆ ಉಳಿವು ಸಾಧ್ಯಾ ಎಂದರು. ಕನ್ನಡವನ್ನು ಮನೆಗಳಲ್ಲಿ ಮಾತನಾಡುವ ಮೂಲಕ ಅನುಷ್ಠಾನ ಮಾಡಬೇಕು. ಕನ್ನಡ ಭಾಷೆಗೆ ಉತ್ತೇಜನ ನೀಡಬೇಕುಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ವಹಿಸಿ ಮಾತನಾಡಿ, ತಾಲೂಕಿಗೆ ಕ್ರೀಡಾಂಗಣ ಕೊರತೆ ಇದ್ದು, ಅಧಿಕಾರಿಗಳು, ಜನ ಪ್ರತಿನಿಧಿಗಳು ಇದನ್ನು ಗಮನಿಸಬೇಕು ಎಂದರು.
ಬುಡಾ ಅಧ್ಯಕ್ಷ ಬೇಬಿ ಕುಂದರ್ ,ಬಂಟ್ವಾಳ ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಶುಭ ಹಾರೈಸಿದರು.
ಇದೇ ವೇಳೆ ಬಂಟ್ವಾಳ ತಾಲೂಕಿನ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಯಿತು.
ಗ್ಯಾರಂಟಿ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಉಪಸ್ಥಿತರಿದ್ದರು.
ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು.