ಜೀವನದಲ್ಲಿ ಮೌಲ್ಯಗಳನ್ನು ಅನುಸರಿಸಿದಾಗಲೇ ಅದಕ್ಕೆ ಬೆಲೆ: ನ್ಯಾ. ಕೃಷ್ಣಮೂರ್ತಿ
ಬಂಟ್ವಾಳ: ಶಿಷ್ಟಾಚಾರದಿಂದ ಹೊರತಾದ ಎಲ್ಲವೂ ಭ್ರಷ್ಟಾಚಾರವೆನಿಸುತ್ತದೆ. ಜೀವನದಲ್ಲಿ ಮೌಲ್ಯಗಳನ್ನು ಅನುಸರಿಸಿದಾಗಲೇ ಅದಕ್ಕೆ ಬೆಲೆ ಬರುವುದು ಎಂದು ಬಂಟ್ವಾಳ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಮೂರ್ತಿ ಎನ್.ಹೇಳಿದ್ದಾರೆ.
ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಲೋಕಾಯುಕ್ತ ಇಲಾಖೆ, ನಗರ ಪೊಲೀಸ್ ಠಾಣೆ ಹಾಗೂ ಶ್ರೀ ವೆಂಕಟರಮಣಸ್ವಾಮಿ ಕಾಲೇಜು, ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ “ಜಾಗೃತಿ ಅರಿವು ಸಪ್ತಾಹ – ೨೦೨೪” ಹಾಗೂ “ಹಿರಿಯ ನಾಗರಿಕರ ದಿನಾಚರಣೆ”ಯ ಪ್ರಯುಕ್ತ ಬಂಟ್ವಾಳ ವಿದ್ಯಾಗಿರಿ ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನಲ್ಲಿ ನಡೆದ ‘ಕಾನೂನು ಅರಿವು ಕಾರ್ಯಕ್ರಮ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವ್ಯಕ್ತಿಯ ಜನನದಿಂದ ಮರಣದವರೆಗೂ ಕಾನೂನಿನ ವ್ಯಾಪ್ತಿಗೊಳಪಡುತ್ತಾನೆ. ಅದರ ತಿಳುವಳಿಕೆ ಎಲ್ಲರಿಗೂ ಅಗತ್ಯವಾದುದು ಎಂದು ಅತಿಥಿಯಾಗಿದ್ದ ಬಂಟ್ವಾಳ ಉಪತಹಶೀಲ್ದಾರ್ ದಿವಾಕರ್ ಮುಗುಳಿಯ ಅವರು ಹೇಳಿದರು.
ಮಕ್ಕಳಿಂದ ಪೋಷಕರವರೆಗೂ ಕಾನೂನಿನ ನೆರವನ್ನು ತಾಲೂಕು ಕಾನೂನು ಸಮಿತಿ ನೀಡಲು ಸದಾ ಸಿದ್ಧವಿದೆ ಅದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳುವಂತೆ ಬಂಟ್ವಾಳ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ ಹರಿಣಿ ಕುಮಾರಿ ಕರೆನೀಡಿದರು.
ಬಂಟ್ವಾಳ ನಗರ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣ,ಮಂಗಳೂರು ಲೋಕಾಯುಕ್ತ ಇಲಾಖೆಯ ಪೊಲೀಸ್ ನಿರೀಕ್ಷಕರಾದ ಸುರೇಶ್ ಕುಮಾರ್ ಪಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಪೂರಕ ಮಾಹಿತಿ ನೀಡಿದರು.
ಬಂಟ್ವಾಳದ ಹಿರಿಯ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಭ್ರಷ್ಟಾಚಾರ ಸದೃಢ ದೇಹಕ್ಕೆ ಬಂದಿರುವ ರೋಗವಿದ್ದಂತೆ. ಭ್ರಷ್ಟಾಚಾರ ರಹಿತವಾಗಿ ಕಾರ್ಯನಿರ್ವಹಿಸಿದರೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಸಲ್ಲಿಸದಂತಾಗುತ್ತದೆ. ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್ ಡಿ.ಎಮ್.ರವರು ಮಾತನಾಡಿ ರಾಷ್ಟ್ರೀಉ ಭದ್ರತೆ ಹಾಗೂ ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರವು ಮಾರಕವಾದುದು. ಭಾರತವನ್ನು ಅಭಿವೃದ್ಧಿಹೊಂದಿದ ದೇಶವನ್ನಾಗಿ ಮಾಡುವುದು ನಮ್ಮ ಕೈಯಲ್ಲಿದೆ ಎಂದರು.