ರೋಟರಿ ಕ್ಲಬ್ ಲೋರೆಟ್ಟೊ ಹಿಲ್ಸ್ ವತಿಯಿಂದ ಹೊಕ್ಕಾಡಿಗೋಳಿ ಶಾಲಾ ಮಕ್ಕಳಿಗೆ ಬಟ್ಟೆ ವಿತರಣೆ
ಬಂಟ್ವಾಳ: ರೋಟರಿ ಕ್ಲಬ್ ಲೋರೆಟ್ಟೊ ಹಿಲ್ಸ್ ,ಹೊಕ್ಕಾಡಿಗೋಳಿಯಲ್ಲಿಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ,ಹಳೇ ವಿದ್ಯಾರ್ಥಿಗಳ ಸಂಘ ಇದರ ಜಂಟಿ ಆಶ್ರಯದಲ್ಲಿ ಹೊಕ್ಕಾಡಿಗೋಳಿಯಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾಥಿಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಬಟ್ಟೆ ವಿತರಣಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ಮಂಗಳವಾರ ನಡೆಯಿತು,

ರೋಟರಿ ಜಿಲ್ಲೆ 3181 ನ ಮಾಜಿ ಸಹಾಯಕ ಗವರ್ನರ್ , ಹೊಕ್ಕಾಡಿಗೋಳಿ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್ ರವರು ಸುಮಾರು 45 ಸಾ.ರೂ.ವೆಚ್ಚದಲ್ಲಿ ಹೊಕ್ಕಾಡಿಗೋಳಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಅಂಗನವಾಡಿ ಮಕ್ಕಳಿಗೆ ಕೊಡುಗೆಯಾಗಿ ಬಟ್ಟೆಯನ್ನು ವಿತರಿಸಿದರು.

ಇದೇ ವೇಳೆ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ವಿಜೇತರಾದ ಕ್ರೀಡಾಳುಗಳನ್ನು ಹಾಗೂ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಪರ್ಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಯ ಬಗ್ಗೆ ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿಯನ್ನು ನೀಡಿ ವಿಮೆಯನ್ನು ಮಾಡಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ದಿನೇಶ್ ಹುಲಿಮೇರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ರೋಟರಿ ಜಿಲ್ಲೆ 3181 ನ ವಲಯ ಸೇನಾನಿಯಾದ ಗಣೇಶ ಶೆಟ್ಟಿ , ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ಬಿನ ಉಪಾಧ್ಯಕ್ಷರಾದ ವಿಜಯ ಫರ್ನಾಂಡಿಸ್ , ಪದಾಧಿಕಾರಿಗಳಾದ, ಹರಿಪ್ರಸಾದ್ ಶೆಟ್ಟಿ ಪ್ರಭಾಕರ ಪ್ರಭು, ಕಿರಣ್ ಮಂಜಿಳ,ಶಾಲಾ ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪದ್ಮನಾಭ ಕೋಟ್ಯಾನ್, ಶಶಿಧರ ಕಲ್ಲಾಪು, ಸುರೇಶ್ ಹೊಕ್ಕಾಡಿ, ಸುರೇಶ್ ಎಚ್. ಹೂಕ್ಕಡಿ, ಶಿವರಾಜ್, ಪಂಚಾಯತ್ ಸದಸ್ಯರಾದ ಪ್ರಭಾಕರ್ ಎಚ್, ಶಿಕ್ಷಕರಾದ ಮೆಟೆಲ್ಡಾ ಡಿಸೋಜ ,ಶುಭವತಿ, ಅಕ್ಷತಾ, ಸುತೀಕ್ಷಾ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರ ಎಸ್.ಸ್ವಾಗತಿಸಿದರು. ಸಿಲ್ವಿಯಾ ಕಾರ್ಯಕ್ರಮ ನಿರೂಪಿಸಿದರು. ಸುಚಿತ್ರ ವಂದಿಸಿದರು.