‘ಕನಕಗಿರಿ ಗೋಶಾಲೆ’ಗೆ ಗೋಗ್ರಾಸ ಸಮರ್ಪಣೆ
ಬಂಟ್ವಾಳ: ನವನೀತ ನಂದಿನಿ ಗೋಸೇವಾ ಪ್ರತಿಷ್ಠಾನ(ರಿ), ಕನಕಗಿರಿ, ಮಂಚಿ ಇದರ ನೇತೃತ್ವದಲ್ಲಿ ‘ಕನಕಗಿರಿ ಗೋಶಾಲೆ’ಗೆ ಭಾರತೀಯ ಜನತಾ ಪರಿವಾರದ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ನೀಡಿ 50 ಸಾ.ರೂ.ವಿಗೂ ಮಿಕ್ಕಿ ಗೋಗ್ರಾಸವನ್ನು ಸಮರ್ಪಿಸಲಾಯಿತು.
ಈ ಸಂದರ್ಭ ಭಾರತೀಯ ಜನಹಿತ ಪರಿವಾರದ ಮುಖಂಡರಾದ ರಾಜಾರಾಮ ಭಟ್ ಕಲ್ಮಡ್ಕ, ಶಿವಭಟ್, ವಕೀಲರಾದ ಶಿವಾನಂದ, ರೊನಾಲ್ಡ್, ಗೋಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಕೈಯ್ಯೂರು ನಾರಾಯಣ ಭಟ್, ಟ್ರಸ್ಟಿ ಅನಂತಪ್ರಭು ನೇರಳಕಟ್ಟೆ ಉಪಸ್ಥಿತರಿದ್ದರು.
ಗೋಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ಗೋಶಾಲೆಯ ಕಾರ್ಯವೈಖರಿಯನ್ನು ಸಭೆಗೆ ಮಂಡಿಸಿದರು.
ಅಧ್ಯಕ್ಷರಾದ ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವನೆಗೈದರು. ಟ್ರಸ್ಟಿ ಸೀತಾರಾಮ ಶೆಟ್ಟಿ.ಸಿ.ಹೆಚ್, ಸದಸ್ಯರಾದ ಹರ್ಷಿತ್ ಶೆಟ್ಟಿ, ಮಂಚಿ,ಗಣೇಶ್ ಆಚಾರ್ಯ,ಶೇಖರ್.ಡಿ,ಮತ್ತಿತರರಿದ್ದರು.