ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ವತಿಯಿಂದ ವಿಜಯದಶಮಿ ಪ್ರಯುಕ್ತ ಭಾನುವಾರ ಗಣವೇಷಧಾರಿಗಳ ಪಥಸಂಚಲನ ಭಾನುವಾರ ಬೆಳಿಗ್ಗೆ 8.00 ಬಿ.ಸಿ.ರೋಡಿನಲ್ಲಿ ನಡೆಯಿತು.

ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದ ವಠಾರದಿಂದ ಹೊರಟ ಪಥಸಂಚಲನ ರಾಜಾರಸ್ತೆಯ ಮೂಲಕ ಬಿ.ಸಿ.ರೋಡಿನ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದವರೆಗೆ ತರಳಿ ಅಲ್ಲಿಂದ ವಾಪಾಸು ಸ್ಪರ್ಶಾ ಕಲಾಮಂದಿರದಲ್ಲಿ ಸಮಾಪನಗೊಂಡಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು, ಸಂಘಪರಿವಾರದ ಕಾರ್ಯಕರ್ತರು, ಬಿಜೆಪಿ ಬಂಟ್ವಾಳ ಮಂಡಲ ಪದಾಧಿಕಾರಿಗಳು,ಮಹಾಶಕ್ತಿ ಕೇಂದ್ರದ ಪ್ರಮುಖರು, ವಿವಿಧ ಮೋರ್ಚಾಗಳ ಪ್ರಮುಖರು, ಜನಪ್ರತಿನಿಧಿಗಳು, ಪ್ರಮುಖರು ಪಥ ಸಂಚಲನದಲ್ಲಿ ಭಾಗವಹಿಸಿದರು.
