ಕೊಲ್ಲೂರು: ಮೂಕಾಂಬಿಕಾ ದೇಗುಲದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ, ಪೊಳಲಿ, ಕಟೀಲು ಸೇರಿದಂತೆ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ
![](https://www.suddi9.com/wp-content/uploads/2024/10/WhatsApp-Image-2024-10-12-at-12.00.21-AM-650x366.jpeg)
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಇಂದು ವಿಜಯದಶಮಿ ಪ್ರಯುಕ್ತ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು, ದಸರಾ ಸಂದರ್ಭದಲ್ಲಿ ಅದರಲ್ಲೂ ಇಂದು ವಿಜದಶಮಿಯಂದು ಪೊಳಲಿ, ಕಟೀಲು, ಕೊಲ್ಲೂರು ಸೇರಿದಂತೆ ಅನೇಕ ದೇವಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದೆ, ಇದರ ಪೈಕಿ ಕೊಲ್ಲೂರು ಕೂಡ ಒಂದು.
ವಿಜಯದಶಮಿ ಹಿನ್ನೆಲೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಗಿದೆ. ಮುಂಜಾನೆ ನಾಲ್ಕು ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಅಕ್ಷರ ಅಭ್ಯಾಸ ಪ್ರಾರಂಭವಗಿದೆ. ಪುರೋಹಿತರ ಮಾರ್ಗದರ್ಶನದಂತೆ ಪೋಷಕರು ಮಕ್ಕಳ ಕೈಹಿಡಿದು ಅಕ್ಷರಾಭ್ಯಾಸ ಮಾಡಿದ್ದಾರೆ.
ಮಕ್ಕಳ ಕೈ ಹಿಡಿದು ಅಕ್ಕಿ ಬಟ್ಟಲಿನಲ್ಲಿ ಓಂಕಾರ ಬರೆಯುವ ಮೂಲಕ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಿಲಾಗಿದೆ. ಇನ್ನು ಕೊಲ್ಲೂರಿನಲ್ಲಿ ಲಕ್ಷ್ಮಿ ಸರಸ್ವತಿ ಮತ್ತು ಪಾರ್ವತಿಯ ಐಕ್ಯವಾಗಿರುವ ಈ ದೇಗುಲಕ್ಕೆ ರಾಜ್ಯ ಹೊರ ರಾಜ್ಯದಿಂದಲೂ ಅಕ್ಷರಾಭ್ಯಾಸ ಮಾಡಿಸಲು ಬರುತ್ತಾರೆ.