ಕಲ್ಲಡ್ಕ ಪದವಿ ಕಾಲೇಜಿನಲ್ಲಿ ರತನ್ ಟಾಟಾ ಅವರಿಗೆನುಡಿನಮನ
ಬಂಟ್ವಾಳ : ಗುರುವಾರ ನಿಧನರಾದ ಹಿರಿಯ ಉದ್ಯಮಿ, ರತನ್ ಟಾಟಾ ಅವರಿಗೆ
ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನಲ್ಲಿ ನುಡಿನಮನ ಸಲ್ಲಿಸಲಾಯಿತು.

ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಅಶ್ವಿತಾ ಅವರು ನುಡಿನಮನ ಸಲ್ಲಿಸಿ
ಭಾರತವನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ನಮ್ಮನ್ನಗಲಿದ ಹಿರಿಯ ಉದ್ಯಮಿ, ರತನ್ ಟಾಟಾ ಅವರ ಸಾಧನೆ,ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯರು, ಮಾನವಿಕ ಮತ್ತು ವಾಣಿಜ್ಯ ಸಂಘಗಳ ನಿರ್ದೇಶಕರು ಉಪಸ್ಥಿತರಿದ್ದರು.