Published On: Wed, Oct 9th, 2024

ಶ್ರೀಕ್ಷೇತ್ರ ಏರಮಲೆ ಅಭಿವೃದ್ಧಿ ನಿಧಿ ಯೋಜನೆ-  ರಾಜಾ ಬಂಟ್ವಾಳ

ಬಂಟ್ವಾಳ :ತಾಲೂಕಿನ ನರಿಕೊಂಬು ಗ್ರಾಮದ ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಹೆಸರಲ್ಲಿ ಅಭಿವೃದ್ಧಿ ನಿಧಿ ಸ್ಥಾಪಿಸಿ  ಅದರ ಆದಾಯಲ್ಲಿ ಕ್ಷೇತ್ರದ ಖರ್ಚು ವೆಚ್ಚಗಳ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ರೂ. 7.08 ಲಕ್ಷ ಠೇವಣಿಯನ್ನು ಸಂಗ್ರಹಿಸಲಾಗಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರಾಜಾ ಬಂಟ್ವಾಳ್  ತಿಳಿಸಿದ್ದಾರೆ..


ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ  ನಡೆದ ಧಾರ್ಮಿಕ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಕೋಟಿ ರೂ. ದೇಣಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದ್ದು,ಈ ನಿಟ್ಟಿನಲ್ಲಿ ಭಕ್ತಾದಿಗಳು  ಸಹಕಾರ ನೀಡುವಂತೆ  ಮನವಿ ಮಾಡಿದರಲ್ಲದೆ ಠೇವಣಿ ಕಡತವನ್ನು  ಕಾರ್ಯದರ್ಶಿಗೆ ಹಸ್ತಾಂತರಿಸಿದರು.
2009ರಲ್ಲಿ ಕ್ಷೇತ್ರದ ಅಭಿವದ್ಧಿ ಕೆಲಸ ಆರಂಭವಾಗಿದ್ದು, ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದಲ್ಲಿ ಭಕ್ತಾಧಿಗಳ ಸಹಕಾರದಿಂದ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಕ್ಷೇತ್ರಕ್ಕೆ ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ಕಿರು ಸಭಾಂಗಣ, ಸುತ್ತುಪೌಳಿ,  ಹೊರಾಂಗಣದಲ್ಲಿ ನೆಲಕ್ಕೆ ಇಂಟರ್ ಲಾಕ್ ಸಹಿತ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.
ಕ್ಷೇತ್ರದ ತಂತ್ರಿಗಳಾದ ಕೇಶವ ಶಾಂತಿಯವರು  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,
ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ತಂತ್ರಿಯಾಗಿ, ಪ್ರರೋಹಿತನಾಗಿ ಕರ್ತವ್ಯ ನಿರ್ವಹಿಸಿದ್ದು,ಚಿಕ್ಕದಾಸ ಗುಡಿಯಿಂದ ಆರಂಭಗೊಂಡು  ಪ್ರಸ್ತುತ ಭವ್ಯವಾದ ಕ್ಷೇತ್ರ ನಿರ್ಮಾಣದಲ್ಲಿ ಭಕ್ತಾಧಿಗಳ ಹಾಗೂ ಸಮಿತಿಯ ಸಹಕಾರವನ್ನು ಸ್ಮರಿಸಿದರು.
ಕ್ಷೇತ್ರದ ಕಾರ್ಯಾಧ್ಯಕ್ಷ ಜಗನ್ನಾಥ ಬಂಗೇರ ಮಾತನಾಡಿದರು.
ಈ ಸಂದರ್ಭಕ್ಷೇತ್ರದ ನಿಕಟಪೂರ್ವ ಸಮಿತಿ ಸದಸ್ಯ  ಸಂಜೀವ ಪೂಜಾರಿ ಕಲ್ಯಾಣಾಗ್ರಹಾರ ಮತ್ತು  ಯಶೋಧ ಸಂಜೀವ ಸಪಲ್ಯ ಅವರ ಸೇವೆಯನ್ನು ಗುರುತಿಸಿ  ಸನ್ಮಾನಿಸಲಾಯಿತು.  ಕಾರ್ಯದರ್ಶಿ ಮನೋಜ್ ಕೇದಿಗೆ ಸಮ್ಮಾನಿತರನ್ನು ಅಭಿನಂದಿಸಿದರು.
ಸಭೆಯಲ್ಲಿ  ದಿ| ರಘು ಸಪಲ್ಯರು ಕ್ಷೇತ್ರದಲ್ಲಿ ಬ್ರಹ್ಮ ಕಲಶ ಸಮಿತಿ ಅಧ್ಯಕ್ಷರಾಗಿ, ಹಾಲಿ ಗೌರವಧ್ಯಕ್ಷರಾಗಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಆಡಳಿತ ಮಂಡಳಿ ಸದಸ್ಯ ಕೇಶವ ಪಲ್ಲತಿಲ ಉಪಸ್ಥಿತರಿದ್ದರು

ಸಹಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ ಸ್ವಾಗತಿಸಿದರು,  ಕೋಶಾಧಿಕಾರಿ ಕಿಶೋರ್ ಕಲ್ಯಾಣಾಗ್ರಹಾರ ವಂದಿಸಿದರು. ರೋಹಿಣಿ ಪ್ರಮೋದ್ ಮತ್ತು ಕೃಷ್ಣಪ್ಪ ಗಾಣಿಗ ಅಂತರ ಕಾರ್ಯಕ್ರಮ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter