ಹೆಬ್ರಿ: ಭೀಕರ ಮಳೆಯಿಂದ ಪ್ರವಾಹ ಸೃಷ್ಟಿ, ಜನರಲ್ಲಿ ಹೆಚ್ಚಾದ ಆತಂಕ
ಹೆಬ್ರಿಯಲ್ಲಿ ಭಾನುವಾರದಂದು ಧಾರಾಕಾರವಾಗಿ ಮಳೆ ಸುರಿದ ಪರಿಣಾಮವಾಗಿ ಪ್ರವಾಹವು ಉಂಟಾಗಿದೆ. ಈ ಪ್ರವಾಹದಲ್ಲಿ ಹಲವು ವಾಹನಗಳು, ಜಾನುವಾರು ಮತ್ತು ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ ಒಂದೇ ಸಮನೆ ಸುರಿದ ಮಳೆಗೆ ಗುಮ್ಮ ಗುಂಡಿ ನದಿ ನೀರು ಉಕ್ಕಿ ಹರಿದಿದ್ದರ ಪರಿಣಾಮವಾಗಿ ಬಲ್ಲಾಡಿ, ಕಂತಾರ್‌ಬೈಲು ಗ್ರಾಮದ ಜನರು ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಏಕಾಏಕಿ ಸುರಿದ ಮಳೆಗೆ ಗ್ರಾಮದ ಕೆಲವು ಮನೆಗಳು ನೀರಿನಲ್ಲಿ ಮುಳುಗಿ ಹೋಗಿದೆ.
ಒಂದು ಕಾರು, ಹದಿನೈದಕ್ಕೂ ಕ್ಕೂ ಹೆಚ್ಚು ದನಕರುಗಳು, ಅಡಿಕೆ ಮರಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ. ಅದಲ್ಲದೇ, ವೃದ್ಧೆಯೊಬ್ಬರು ಈ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಭೀಕರ ಪ್ರವಾಹದಳಲ್ಲಿ ತತ್ತರಿಸಿದ ಹೋದ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ . ಈಗಾಗಲೇ ಈ ಸ್ಥಳಕ್ಕೆ ಸ್ಥಳೀಯರು, ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.