ಬಂಟ್ವಾಳ ವಲಯಮಟ್ಟದ ಕ್ರೀಡಾಕೂಟ
ಬಂಟ್ವಾಳ: ದ.ಕ.ಜಿ.ಪಂ.ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಎಸ್ ವಿ ಎಸ್ ವಿದ್ಯಾಸಂಸ್ಥೆ ಬಂಟ್ವಾಳ ಇವುಗಳ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಬಂಟ್ವಾಳ ವಲಯ ಮಟ್ಟದ ಎರಡು ದಿನಗಳ ಕ್ರೀಡಾ ಕೂಟವು ಎಸ್ .ವಿ.ಎಸ್ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಪುಂಡಲೀಕಬಾಳಿಗಾ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭಹಾರೈಸಿದರು.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಆಶೋಕ್ ಶೆಣೈ ಅವರು ಕಾರ್ಯಕ್ತಮದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಸಂಚಾಲಕರಾದ ಭಾಮಿ ನಾಗೇಂದ್ರನಾಥ ಶೆಣೈ,ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥ ಎಂ.ಜಿ.,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ,ಕಾರ್ಯದರ್ಶಿ ಸರ್ವೋತ್ತಮ ಬಾಳಿಗಾ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶಿವಪ್ರಸಾದ್ ರೈ, ವಲಯ ದ ನೋಡಲ್ ಆದ ಜಗದೀಶ್ ರೈ ತುಂಬೆ,ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೋಶನಿ ತಾರಾಡಿಸೋಜ,ದೈಹಿಕ ಶಿಕ್ಷಣ ಶಿಕ್ಚಕರಾದ ಚಂದ್ರಹಾಸ ಶೆಟ್ಟಿ,ವೇದಾವತಿ ಮತ್ತಿತರರು ಉಪಸ್ಥಿತರಿದ್ದರು.
ಎಸ್ ವಿ ಎಸ್ ದೇವಳ ಕನ್ನಡ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ.,ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಚಕರಾದ ದಿನೇಶ್ ಕುಮಾರ್ ವಂದಿಸಿದರು.ಶಿಕ್ಷಕ ಮುರಳೀಧರ್ ಕಾರ್ಯಕ್ರಮ ನಿರೂಪಿಸಿದರು.