ಮಂಗಳೂರು: ಸಂಸದೀಯ ಇಂಧನ ಸ್ಥಾಯಿ ಸಮಿತಿಗೆ ಸಂಸದ ಬ್ರಿಜೇಶ್ ಚೌಟ ನೇಮಕ
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಸದೀಯ ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಈ ಸ್ಥಾಯಿ ಸಮಿತಿಯು ಕೇಂದ್ರ ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯದ ಮೇಲುಸ್ತುವಾರಿಗಳ ಬಗ್ಗೆ ಕಾರ್ಯನಿರ್ವಹಿಸಲಿದೆ.
ಈ ಸ್ಥಾಯಿ ಸಮಿತಿಗೆ ನೇಮಕಗೊಂಡಿರುವ ಕ್ಯಾ. ಚೌಟ ಅವರು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ನೀತಿ-ನಿಯಮಗಳು, ಕಾರ್ಯಯೋಜನೆಗಳ ಬಗ್ಗೆ ಪುನರ್ ಪರಿಶೀಲಿಸುವ ಹಾಗೂ ನಿಗಾ ವಹಿಸುವಲ್ಲಿ ಪಾತ್ರವಹಿಸಲಿದ್ದಾರೆ. ಈ ಸಂಸದೀಯ ಸ್ಥಾಯಿ ಸಮಿತಿಯ ಮೊದಲ ಸಭೆಯು ಅ.7ರಂದು ನಡೆಯಲಿದೆ ಎಂದು ಪ್ರಕಟಣೆಯು ತಿಳಿಸಿದೆ.