ಕಬ್ ,ಬುಲ್ ಬುಲ್ಸ್ ,ಸ್ಕೌಟ್ ಗೈಡ್ ವಾರ್ಷಿಕ ಶಿಬಿರ ೨೦೨೪
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಮತ್ತು ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆ ವಿದ್ಯಾಗಿರಿ ಬಂಟ್ವಾಳ ಇದರ ಸಂಯುಕ್ತಾಶ್ರಯದಲ್ಲಿ ಕಬ್ ಬುಲ್ ಬುಲ್ಸ್, ಸ್ಕೌಟ್ ಗೈಡ್ ವಾರ್ಷಿಕ ವಿಶೇಷ ಶಿಬಿರವುನಡೆಯಿತು.
ಕರ್ನಾಟಕ ಭಾರತ ಸ್ಕೌಟ್ ಗೈಡ್‌ನ ತರಬೇತಿ ನಾಯಕರಾದ ಪ್ರತಿಮ್ ಕುಮಾರ್ ಕೆ.ಎಸ್.ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ ಗೈಡ್ ಆಯುಕ್ತರಾದ ಬಿ. ಮಹಮ್ಮದ್ ತುಂಬೆ, ಕಾಸರಗೋಡು ಸ್ಕೌಟ್‌ನ ಸಹಾಯಕ ಜಿಲ್ಲಾ ಆಯುಕ್ತರಾದ ಚೇವಾರು ವಿನೋದ ಮತ್ತು ಎರಡೂ ಸಂಸ್ಥೆಗಳ ಮುಖ್ಯಸ್ಥರು, ಕಬ್ ಮಾಸ್ಟ್ರ್, ಪ್ಲಾಕ್ ಲೀಡಸ್೯ , ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‌ಗಳು ಉಪಸ್ಥಿತರಿದ್ದರು. ಮೂರು ದಿನಗಳ ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸಮಯ ಪ್ರಜ್ಞೆ, ಶಿಸ್ತು, ಸಹಜೀವನ , ಪರಸ್ಪರ ಸಹಕಾರ, ನಾಯಕತ್ವ , ಪ್ರಥಮ ಚಿಕಿತ್ಸೆ, ದಿಕ್ಸೂಚಿ , ಬೆಂಕಿ ಇಲ್ಲದೆ ಅಡುಗೆ ತಯಾರಿ , ಬಿ.ಪಿಸಿಕ್ಸ್, ಯೋಗ, ಸಮವಸ್ತ್ರ, ಧ್ವಜಸ್ತಂಭ ತಯಾರಿ , ಮ್ಯಾಪಿಂಗ್‌ನ ಮಹತ್ವವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಬೋಧಿಸಲಾಯಿತು. ಹೊರಸಂಚಾರ, ಆಶ್ರಮ ಭೇಟಿ ಮತ್ತು ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆಯ ಪ್ರಾತ್ಯಕ್ಷಿತೆ ಶಿಬಿರದಲ್ಲಿ ನಡೆಸಲಾಯಿತು. ಒಟ್ಟು ೨೫೦ ವಿದ್ಯಾರ್ಥಿಗಳು ಶಿಬಿರದ ಉಪಯೋಗ ಪಡೆದುಕೊಂಡರು.
ವಿದ್ಯಾರ್ಥಿಗಳಾದ ನಿಹಾರ್ ಸ್ವಾಗತಿಸಿ, ಕುಮಾರಿ ಅಭಿಜ್ಞಾ ವಂದಿಸಿದರು, ಕುಮಾರಿ ಆಶ್ನಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.