ಕಲ್ಲಡ್ಕ ಶ್ರೀರಾಮ ಪದವಿ ವಿದ್ಯಾರ್ಥಿಗಳಿಂದ ಬೀಚ್ ಫೆಸ್ಟ್
ಬಂಟ್ವಾಳ:ಕಲ್ಲಡ್ಕ ಶ್ರೀರಾಮ ಪದವಿ ವಿಭಾಗದಿಂದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಚ್ಛತಾ ಆಂದೋಲನದ ಸಮಾರೋಪ ಸಮಾರಂಭ ಮತ್ತು ಕ್ರೀಡಾ ಸಂಘದ ಉದ್ಘಾಟನೆ , ಬೀಚ್ ಫೆಸ್ಟ್ ಕಾರ್ಯಕ್ರಮವು ಮಂಗಳೂರಿನ ತಣ್ಣೀರು ಬಾವಿಯಲ್ಲಿ ನಡೆಯಿತು.
ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಸಮುದ್ರಕ್ಕೆ ಕ್ಷೀರಾಭಿಷೇಕ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಗೈದರು.
ಸಾಮಾಜಿಕ ಕಾರ್ಯಕರ್ತ ಅರವಿಂದ್ ಬೆಂಗ್ರೆ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಯತಿರಾಜ್ ಪಿ, ಸಹ ಯೋಜನಾಧಿಕಾರಿ ವರ್ಷಾ, ಕ್ರೀಡಾ ಸಂಘದ ನಿರ್ದೇಶಕರಾದ ಪ್ರಶಾಂತ್ ಸೋಮಯಾಜಿ ,ಉಪಪ್ರಾಂಶುಪಾಲೆ ಸುಕನ್ಯಾ ಸಿ. ಉಪಸ್ಥಿತರಿದ್ದರು. ಕಲಾ ವಿಭಾಗದ ಮುಖ್ಯಸ್ಥರಾದ ಜಯಲಕ್ಷ್ಮಿ ಮಾತಾಜಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸ್ವಚತಾ ಹೀ ಸೇವಾ ಕಾರ್ಯಕ್ರಮವು ಸೆ. 17 ರಿಂದ ಅ. 03 ರವರೆಗೆ ನಡೆದಿದ್ದು ಸಮುದ್ರ ಕಿನಾರೆ ಯಲ್ಲಿನ ಕಸ , ಪ್ಲಾಸ್ಟಿಕ್ ಹೆಕ್ಕಿ ಶುಚಿಗೊಳಿಸುವ ಮೂಲಕ ಸಂಪನ್ನಗೊಂಡಿತು. ಬಳಿಕ ಮರಳು ಶಿಲ್ಪ, ವಾಲಿಬಾಲ್, ಥ್ರೋ ಬಾಲ್, ಓಟಗಳು ಮುಂತಾದ ಆಟಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದು ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.