ಶಿಕ್ಷಣ ಸಾಧಕಿಗೆ ದ. ಕ. ಕೃ.ಅ. ಸ. ಸಂಘದಿಂದ ಸನ್ಮಾನ
ಬಂಟ್ವಾಳ: ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರ ಸಂಘ ನಿಯಮಿತ ಉದ್ಯೋಗಿ ಬಾಬು.ಎಂ ಹಾಗೂ ಕೆ.ಪಿ.ಎಸ್ ಕೆಯ್ಯೂರಿನ ಮುಖ್ಯ ಅಡುಗೆ ಸಿಬ್ಬಂದಿ ಸುಂದರಿ ಬಿ.ಎಂ. ಅವರ ಪುತ್ರಿ ಶಿಕ್ಷಣ ಸಾಧಕಿ ಸೌಜನ್ಯ ಬಿ.ಎಂ.ಕೆಯ್ಯೂರು ಅವರನ್ನು ನಿಯಮಿತದ ವತಿಯಿಂದ ಸನ್ಮಾನಿಸಲಾಯಿತು.

ಪ್ರಾಥಮಿಕ, ಪ್ರೌಢ ಮತ್ತು ಪಿ.ಯು.ಸಿ ಶಿಕ್ಷಣವನ್ನು ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಪೂರ್ಣಗೊಳಿಸಿದ್ದು, ವಿವೇಕಾನಂದ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿ ಪಡೆದಿರುತ್ತಾರೆ. ಉಪ್ಪಿನ೦ಗಡಿಯ ಸರಕಾರಿಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಎಂ.ಎ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮರ‍್ಯಾಂಕ್‌ನೊಂದಿಗೆ ಚಿನ್ನದ ಪದಕ ಮತ್ತು ಆರು ನಗದು ಪುರಸ್ಕಾರ ಪಡೆದು
ಕೊಂಡಿದ್ದಾರೆ.
ಶಿಕ್ಷಕರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಯುಜಿಸಿ ಎನ್ ಇಟಿಯಲ್ಲುಉತ್ತೀರ್ಣರಾಗಿದ್ದು, ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆದಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ ನಿಯಮಿತದ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷರಾದ ಕೆ.ರವೀಂದ್ರ ಕಂಬಳಿ , ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ,ನಿರ್ದೇಶಕರುಗಳಾದ ಎಸ್ ರಾಜು ಪೂಜಾರಿ,ಮೋನಪ್ಪ ಶೆಟ್ಟಿ ಎಕ್ಕಾರು,ಎನ್ ಎ ರವಿ ಬಸಪ್ಪ,ಸೀತಾರಾಮ್ ರೈ,ಭಾಸ್ಕರ್ ಎಸ್ ಕೋಟ್ಯಾನ್,ಎಸ್ ಬಿ ಜಯರಾಮ್ ರೈ,ಜಯರಾಮ್ ಪಿ.ಸಿ,ಕರುಣಾಕರ ಶೆಟ್ಟಿ ಬಿ, ಕೃಷ್ಣಯ್ಯ ಮೂಲೆತೋಟ,ಎನ್ ರಾಜಶೇಖರ ಜೈನ,ಜಯಶಂಕರ ಬಾಶ್ರೀತ್ತಾಯ,ಜೆ ತಿಮ್ಮ ಪೂಜಾರಿ,ಬಿ ಭಾಸ್ಕರ ಕಾಮತ್,ವೆಂಕಪ್ಪ,ಕ. ನೀಲಪ್ಪ ನಾಯ್ಕ ಪ್ರಭಾ ಮಾಲಿನಿ,ಶಾರದಾ ಭಾಗವತ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಶಶಿ ಕುಮಾರ್ ರೈ ಬಿ, ಸಹಕಾರ ಸಂಘ ಗಳ ಉಪ ನಿಬಂಧಕರು ಹೆಚ್ .ಎನ್ .ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು