ಮಿಜಾರು: ಮಿಜಾರಿನ ಕರ್ನಾಟಕ ಪಬ್ಲಿಕ್ ಸ್ಕೂಲಿನ ಎಲ್ ಕೆ ಜಿ, 7 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ
ಕರ್ನಾಟಕ ಪಬ್ಲಿಕ ಸ್ಕೂಲ್ (ಪ್ರಾಥಮಿಕ) ಮಿಜಾರಿನಲ್ಲಿ ಎಲ್ ಕೆ ಜಿ ಯಿಂದ ಎಳನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಹೆತ್ತವರಿರೊಂದಿಗೆ ಇಂದು ಸೆಪ್ಟೆಂಬರ್ 30 ರಂದು ಬೆಳಗ್ಗೆ 10.30 ಕ್ಕೆ ಪೋಷಕರ ಸಭೆಯು ನಡೆಯಿತು.
ಈ ಸಭೆಯಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಮೊಟ್ಟೆಗಳ ಬಗ್ಗೆ ಹಾಗೂ ಮುಂದಿನ ಶೈಕ್ಷಣಿಕ ವರ್ಷದ ಬಗ್ಗೆ ವಿಚಾರ ವಿನಿಮಯವು ನಡೆಯಿತು. ಈ ದಿನವೇ ಆಯೋಜಿಸಲಾಗಿದ್ದ ಪೌಷ್ಠಿಕ ವನ ನಿರ್ಮಾಣ ಮಾಡುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನೆಯಲ್ಲೇ ತಂದಿದ್ದ ಗಿಡವನ್ನು ಹೆತ್ತವರೊಂದಿಗೆ ಶಾಲೆಯಲ್ಲಿ ನೆಟ್ಟರು.
ವೇದಿಕೆಯಲ್ಲಿ ಎಸ್ ಡಿ ಎಮ್ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ, ಮಾಜಿ ಅಧ್ಯಕ್ಷರು ಇಕ್ಬಲ್ ಅಹ್ಮದ್, ಪೋಷಕರ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಕಾರ್ಯದರ್ಶಿ ರಮಾನಂದ ಹಾಗೂ ಎಲ್ಲಾ ಶಿಕ್ಷಕರ ವೃಂದದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಸ್ ನಾಗೇಶ್ ಸ್ವಾಗತಿಸಿ ನಿರೂಪಿಸಿದರು.