ಶಿವಮೊಗ್ಗ: ಮಾರುಕಟ್ಟೆಯಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ, ಜನರಲ್ಲಿ ಹೆಚ್ಚಿದ ಆತಂಕ
ಬೆಳ್ಳುಳ್ಳಿ ದರವು ಗಗನಕ್ಕೆ ಏರುತ್ತಿದ್ದಂತೆ, ಸಗಟು ವ್ಯಾಪಾರಸ್ಥರು ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಚೀನಾದ ಬೆಳ್ಳುಳ್ಳಿಯು ಶಿವಮೊಗ್ಗದ ಮಾರುಕಟ್ಟೆಯಲ್ಲಿ ಸದ್ದಿಲ್ಲದೇ ಮಾರಾಟವಾಗುತ್ತಿದ್ದು, ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಅದಲ್ಲದೇ ನಿಷೇಧಿತ ಬೆಳ್ಳುಳ್ಳಿ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಬಗ್ಗೆ ಅರಿಯದ ಗ್ರಾಹಕರು ಚೀನಾ ಬೆಳ್ಳುಳ್ಳಿ ಖರೀದಿ ಮಾಡುತ್ತಿದ್ದಾರೆ.
ಸರ್ಕಾರವು ಚೀನಾ ದೇಶ ಮತ್ತು ರಾಜ್ಯದಲ್ಲಿ ಚೀನಾ ಬೆಳ್ಳುಳ್ಳಿ ಬಳಕೆಯನ್ನು ನಿಷೇಧಿಸಿದೆ. ಹತ್ತು ವರ್ಷಗಳ ಹಿಂದೆಯೇ ಇದರ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ನೇಪಾಳ, ಮ್ಯಾನ್ಮಾರ್, ಭೂತಾನ್ ಕಳ್ಳ ಮಾರ್ಗವಾಗಿ ದೇಶ ಮತ್ತು ರಾಜ್ಯಕ್ಕೆ ಚೀನಾ ಬೆಳ್ಳುಳ್ಳಿಯು ಬಂದಿದೆ. ಇದೀಗ ಶಿವಮೊಗ್ಗ ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟವಾಗುತ್ತಿದ್ದು, ಹೊಟೇಲ್ ಗಳಲ್ಲಿ ಇದರ ಬಳಕೆ ಮಾಡಲಾ ಗುತ್ತಿದೆ.
ಆರೋಗ್ಯದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆ. ಚೀನಾದಲ್ಲಿ ಬೆಳ್ಳುಳ್ಳಿಗೆ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡುವ ಕಾರಣ ಹೊಟ್ಟೆ ಹುಣ್ಣು, ಸೋಂಕು ಇತ್ಯಾದಿ ಸಮಸ್ಯೆಗಳೂ ಕಾಡುತ್ತದೆ. ಅದಲ್ಲದೇ, ಮೂತ್ರಪಿಂಡಗಳ ಆರೋಗ್ಯದ ಮೇಲೆ ಇದರ ಪರಿಣಾಮವೇ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರಿಗಳ ಅಧಿಕಾರಿಗಳು ಈ ನಿಷೇಧಿತ ಚೀನಾ ಬೆಳ್ಳುಳ್ಳಿ ಅಕ್ರಮ ಮಾರಾಟ ದಂಧೆಗೆ ಕಡಿವಾಣ ಹಾಕಬೇಕೆನ್ನುವ ಒತ್ತಾಯವು ಸ್ಥಳೀಯರಿಂದ ಕೇಳಿ ಬರುತ್ತಿದೆ.