ಮಂಗಳೂರಿನಲ್ಲಿ ಗುಂಡು ಪಾರ್ಟಿಯಲ್ಲಿ ಅಕ್ರಮ ಡಿಫೆನ್ಸ್ ಲಿಕ್ಕರ್ ಪೂರೈಕೆ
ಮಂಗಳೂರು: ಮಂಗಳೂರಿನಲ್ಲಿ ಗುಂಡು ಪಾರ್ಟಿಯಲ್ಲಿ ಅಕ್ರಮ ಡಿಫೆನ್ಸ್ ಲಿಕ್ಕರ್ ಪೂರೈಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಮಂಗಳೂರಿನ ನ್ಯಾಟ್‌ಕಾನ್ ಸಮಾವೇಶದಲ್ಲಿ ಅಕ್ರಮವಾಗಿ ಡಿಫೆನ್ಸ್ ಲಿಕ್ಕರ್ ಪೂರೈಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಕಠಿಣನಿಯಮವಿದ್ದರೂ ಕೆಲ ಅಧಿಕಾರಿಗಳ ಕೃಪಾಕಟಾಕ್ಷದಿಂದ ಅಕ್ರಮ ಧಂದೆ ನಡೆದಿದೆ ಎಂದು ಹೇಳಲಾಗಿದೆ. ಡಿಫೆನ್ಸ್(ರಕ್ಷಣಾ ಇಲಾಖೆ) ವಿಭಾಗ, ಗೋವಾದಿಂದ ಮದ್ಯ ಅಕ್ರಮ ಸರಬರಾಜು ಮಾಡಲಾಗಿದೆ.
ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚಿಸಿ ಮದ್ಯ ಪೂರೈಕೆ ಮಾಡಲಾಗಿದೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಫರ್ಸನಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯಿಂದ ‘ನ್ಯಾಟ್‌ಕಾನ್’ ಸಮಾವೇಶ ನಡೆಸಿತ್ತು. ಆಯೋಜಕರು ರಾತ್ರಿ ಪಾರ್ಟಿಗೆ ಅಬಕಾರಿ ಇಲಾಖೆಯಿಂದ ಸಿಎಲ್-5(ಒಂದು ದಿನ) ಪರವಾನಗಿ ಪಡೆದಿದ್ದರು ಎಂದು ಹೇಳಲಾಗಿದೆ.
ರಕ್ಷಣಾ (ಡಿಫೆನ್ಸ್) ಇಲಾಖೆ ಗೋವಾದಿಂದ ಮದ್ಯಗಳನ್ನು ಅಕ್ರಮವಾಗಿ ತಂದು ವಿತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಬಕಾರಿ ನಿಯಮ ಪ್ರಕಾರ ಗೋವಾ ಮದ್ಯವನ್ನು ರಾಜ್ಯಕ್ಕೆ ತಂದು ಮಾರಾಟ ಮಾಡುವಂತಿಲ್ಲ. ಅಲ್ಲದೆ ಡಿಫೆನ್ಸ್ (ರಕ್ಷಣಾ ಸಿಬ್ಬಂದಿ)ಗೆ ಸೀಮಿತವಾದ ಮದ್ಯ(ನಾಟ್ ಫಾರ್ ಸೇಲ್) ಮಾರಾಟಕ್ಕೆ ಅವಕಾಶವಿಲ್ಲ ಎಂಬ ನಿಯಮಗಳು ಇದೆ.
ಆದರೂ ನಿಯಮಬಾಹಿರವಾಗಿ ನ್ಯಾಟ್ ಕಾನ್ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗಿದೆ. ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗೋವಾ ಮದ್ಯ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ 39.89 ಲೀ. ಬ್ಲ್ಯಾಕ್ ಡಾಗ್ ಸೇರಿದಂತೆ ಇತರ ಮದ್ಯ ಪತ್ತೆಯಾಗಿದೆ. ಅಕ್ರಮವಾಗಿ ಡಿಫೆನ್ಸ್, ಗೋವಾ ಮದ್ಯ ಪತ್ತೆ ಹಿನ್ನೆಲೆ ಎಫ್‌ಐರ್ ದಾಖಲು ಮಾಡಲಾಗಿದೆ. 39.89 ಲೀ. ಡಿಫೆನ್ಸ್ ಮದ್ಯ, 19.14 ಲೀ. ಬಿಯರ್, 38 ಬ್ಲ್ಯಾಕ್ ಡಾಗ್ ಖಾಲಿ ಬಾಟಲಿ ಪತ್ತೆಯಾಗಿದೆ. ಡಿಫೆನ್ಸ್ ಮದ್ಯದಲ್ಲಿ ಬ್ಲ್ಯಾಕ್‌ಡಾಗ್ ಮತ್ತು ಟೀಚರ್ ಬ್ಯಾಂಡ್ಗಳು ಪತ್ತೆಯಾಗಿದೆ. ಅಲ್ಲದೆ ಗೋವಾದಿಂದ ತರಿಸಲಾದ ಬಕಾರ್ಡಿ ಬ್ಯಾಂಡ್ಗಳು ಇತ್ತು ಎಂದು ಹೇಳಲಾಗಿದೆ.