ಮಂಗಳೂರು: ಕುಡಿದು ಚಿಕಿತ್ಸೆ ನೀಡಲು ಬಂದ ಪಿಜಿ ವೈದ್ಯ; ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೋಗಿ ಕಡೆಯವರು
ವೈದ್ಯನೊಬ್ಬ ಕಂಠಪೂರ್ತಿ ಕುಡಿದು ರೋಗಿಗೆ ಚಿಕಿತ್ಸೆ ನೀಡಲು ಬಂದ ಘಟನೆ ಕರ್ತವ್ಯದಲ್ಲಿ ಮಂಗಳೂರಿನ ಎ.ಜೆ.ಮೆಡಿಕಲ್ ಕಾಲೇಜು-ಆಸ್ಪತ್ರೆಯಲ್ಲಿ ನಡೆದಿದೆ. ಕರ್ತವ್ಯದಲ್ಲಿ ನಿರತರಾಗಿರುವಾಗ ಕಂಠಪೂರ್ತಿ ಕುಡಿದು ಬಂದ ಪಿಜಿ ವೈದ್ಯ ಡಾ. ಶ್ರೀಕಾಂತ್‌ನನ್ನು ರೋಗಿಯ ಕಡೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾತ್ರಿ ಓಪಿಡಿಯಲ್ಲಿ ಕರ್ತವ್ಯದಲ್ಲಿ ನಿರತನಾಗಿದ್ದಾಗಲೇ ವೈದ್ಯ ಕುಡಿದು ಬಂದಿದ್ದು, ಎಣ್ಣೆ ಏಟಿಗೆ ಎಲ್ಲೋ ಬಿದ್ದು ಬಟ್ಟೆಗಳು ಕೂಡಾ ಗಲೀಜಾಗಿದ್ದವು. ನಂತರ ಪಾನಮತ್ತ ವೈದ್ಯನನ್ನು ಆಸ್ಪತ್ರೆಯ ಸಿಬ್ಬಂದಿಗಳು ಹೊರ ಕಳುಹಿಸಿದ್ದಾರೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.