Published On: Sun, Sep 29th, 2024

 ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್: ಕಬಡ್ಡಿ ಉತ್ಸವದ ಲೋಗೋ ಬಿಡುಗಡೆ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ 40ನೇ ವಾರ್ಷಿಕ ಕಬಡ್ಡಿ ಪಂದ್ಯಾಟದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿನ.16 ಮತ್ತು 17ರಂದು ಪುಂಜಾಲಕಟ್ಟೆಯಲ್ಲಿ ನಡೆಯಲಿರುವ ಅಂತಾರಾಜ್ಯ ಮಟ್ಟದ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್‌ಮೆಡಲ್ ಕಬಡ್ಡಿಉತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮ ರವಿವಾರ‌ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಇರ್ವತ್ತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಬಡ್ಡಿ ನಮ್ಮ ದೇಶದ ಮಣ್ಣಿನ ಆಟ. ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಅತಿ ಅಗತ್ಯ ಎಂದರು.


ಪಂದ್ಯಾಟದ ಲೋಗೋ ಬಿಡುಗಡೆಗೊಳಿಸಿದ ಕಬಡ್ಡಿ ಆಟಗಾರ ಆಕಾಶ್ ಮಂಗಳೂರು ಅವರು ಮಾತನಾಡಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್್ಸ ಕ್ಲಬ್ ನ   ಕಬಡ್ಡಿ ಪಂದ್ಯಾಟ ಅಂತಾರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದೆ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ನಡೆಯುವ ಕಬಡ್ಡಿ ಪಂದ್ಯಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ  ಪ್ರಾಸ್ತಾವಿಕವಾಗಿ ಮಾತನಾಡಿ,  ನಿರಂತರವಾಗಿ 40 ವರ್ಷಗಳಿಂದ ಕಬಡ್ಡಿ ಪಂದ್ಯಾಟ ನಡೆಸುತ್ತಿದ್ದು, ಈ ಬಾರಿ ಬಂಗಾರದ ಪದಕದ ಪ್ರಶಸ್ತಿ ನೀಡಲಾಗುವುದು. ಸಮಾಜದಲ್ಲಿ ಸಾಮರಸ್ಯ, ಬಾಂಧವ್ಯ ಹಾಗೂ ಪ್ರೀತಿ ವಿಶ್ವಾಸಗಳು ಬೆಳೆಯಲು ಕಬಡ್ಡಿ ಸಹಕಾರಿಯಾಗಿದೆ ಎಂದರು. ಕೂಟದಲ್ಲಿ ಐದು ವಿಭಾಗದಲ್ಲಿ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ನಡೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗ, ಕಾಲೇಜು ವಿಭಾಗ ಮತ್ತು ಅಂತಾರಾಜ್ಯ ಮಟ್ಟದ 55 ಕೆಜಿ ಹಾಗೂ 65 ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಅವರು ಹೇಳಿದರು.
ಕಬಡ್ಡಿ ತೀರ್ಪುಗಾರರ ಸಂಘದ ಸಂಚಾಲಕ ಫ್ರಾನ್ಸಿಸ್ ವಿ.ವಿ., ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತಾಲೂಕು ಕಾರ್ಯದರ್ಶಿ ಚಂದ್ರಶೇಖರ ಕರ್ಣ, ಪ್ರಮುಖರಾದ ವಿಜಯ ರೈ, ಡಾ.ರಾಮಕೃಷ್ಣ ಎಸ್. ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಶಿವಪ್ಪಗೌಡ ನಿನ್ನಿಕಲ್ಲು, ಬಬಿತಾ ದಿನೇಶ್, ಬೇಬಿರೇಖಾ ಶೆಟ್ಟಿ, ದೇವದಾಸ ಅಬುರ, ಎಡ್ವರ್ಡ್ ಡಿಸೋಜ, ಶಾಜಿ ಹುಸೇನ್, ಶೇಖರ ಪೂಜಾರಿ ಅಗಲ್ದೋಡಿ, ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟು ಗುತ್ತು, ಸಂತೋಷ್ ಕುಮಾರ್, ಪ್ರಕಾಶ್ ಅನಿಲಡೆ, ಪ್ರವೀಣ್ ಶೆಟ್ಟಿ ಕುರ್ಡುಮೆ, ಉಮೇಶ್ ಅಲೆಕ್ಕಿ, ಹೇಮಂತ ಕುಮಾರ್ ಮೂರ್ಜೆ, ಕ್ಲಬ್‌ ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಬಡ್ಡಿ ಸಂಚಾಲಕ ರಾಜೇಶ್ ಪಿ.ಬಂಗೇರ, ಸಹ ಸಂಚಾಲಕ ಅಬ್ದುಲ್‌ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter