ಜಿಲ್ಲೆಯ ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡ ಸಿಬ್ಬಂದಿಗಳಿಗೆ ಬೀಳ್ಕೊಡುವ ಸಮಾರಂಭ
ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪದೋನ್ನತಿ ಪಡೆದ ಹಾಗೂ ಜಿಲ್ಲೆಯ ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡ ಸಿಬ್ಬಂದಿಗಳನ್ನು ಬೀಳ್ಕೊಡುವ ಸಮಾರಂಭ ಬಿ.ಸಿ.ರೋಡಿನ ಹೊಟೇಲ್ ರಂಗೋಲಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಉಪವಿಭಾಗದ ಡಿ.ವೈ.ಎಸ್.ಪಿ
ವಿಜಯಪ್ರಸಾದ್ ಅವರು ಮಾತನಾಡಿ, ಪೊಲೀಸ್ ಠಾಣೆಗೆ ಸಮಸ್ಯೆಯನ್ನು ಹೇಳಿಕೊಂಡು ಬರುವ ಜನಸಾಮಾನ್ಯರಿಗೆ ನ್ಯಾಯ ಸಿಗುವ ರೀತಿಯಲ್ಲಿ ಗೌರವದಿಂದ ವರ್ತಿಸಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಉತ್ತಮ ಹೆಸರು ಪಡೆಯುವುದು ಅತ್ಯಂತ ಕಷ್ಟದ ಕೆಲಸ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡ ಸಿಬ್ಬಂದಿಗಳು ಮೇಲಾಧಿಕಾರಿಗಳ ಜೊತೆ ಉತ್ತಮ ಭಾವನೆಗಳನ್ನು ಹೊಂದಿದ್ದಾರೆ ಎಂದರು.
ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಮಾತನಾಡಿ,ಪೊಲೀಸ್ ಇಲಾಖೆಯಲ್ಲಿ ಸಮಯಪ್ರಜ್ಞೆ ಬಹಳ ಅವಶ್ಯಕವಾಗಿದ್ದು, ಶಿಸ್ತನ್ನು ಆಳವಡಿಸಿಕೊಂಡು ಸಾಧನೆಯ ಶಿಖರವನ್ನು ಏರುವಂತೆ ಶುಭ ಹಾರೈಸಿದರು.
ವೇದಿಕೆಯಲ್ಲಿಡಿ.ಎಆರ್.ಆರ್.ಪಿ.ಐ.
ನಾರಾಯಣ ಪೂಜಾರಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ
ಹರೀಶ್, ಎಸ್.ಐ.ಗಳಾದ ಅಶೋಕ್, ಲೋಲಾಕ್ಷ, ಭಾರತಿ ಉಪಸ್ಥಿತರಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಜಿಲ್ಲೆಯ ವಿವಿಧ ಠಾಣೆಗಳಿಗೆ ಪದೋನ್ನತಿ ಹಾಗೂ ವರ್ಗಾವಣೆಗೊಂಡ ಎ.ಎಸ್.ಐ.ಗಳಾದ ಮೋನಪ್ಪ ಗೌಡ, ಶಿಜು, ಹೆಚ್.ಸಿ. ಸುರೇಶ್, ರಾಧಾಕೃಷ್ಣ, ಮಾದವ,ಚಂದ್ರಕಾಂತಿ, ಸಿಬ್ಬಂದಿಗಳಾದ ಆದರ್ಶ್, ಅಜಯ್, ಸೋಮೇಶೇಖರ್, ಶೇಖರ್, ವಿಜಯಕುಮಾರ್, ನಾಗನಾಥ್, ರಂಜಾನ್, ಸುರೇಶ್ ಉಪ್ಪಾರ್, ಮಹೇಂದ್ರ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಎಸ್.ಐ.ಮೂರ್ತಿ ಸ್ವಾಗತಿಸಿದರು.
ಗ್ರಾಮಾಂತರ ಪೋಲೀಸ್ ಸಿಬ್ಬಂದಿಗಳಾದ ನಾಗರಾಜ್ ಮತ್ತು ಪ್ರಶಾಂತ್ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.