ಬಂಟವಾಳ ತಾಲೂಕು ಬಂಟರ ಸಂಘದ ವತಿಯಿಂದ ೧೨೦೦ ವಿದ್ಯಾರ್ಥಿಗಳಿಗೆ ಒಟ್ಟು ೪೫ ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ವಿತರಣೆ
ಬಂಟ್ವಾಳ:ಬಂಟರ ಸಂಘ ಬಂಟವಾಳ ತಾಲೂಕು (ರಿ.)ಇದರ ವತಿಯಿಂದ ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಇವರ ಸಹಕಾರದೊಂದಿಗೆ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಎಲ್ಲಾ ಸಮಾಜಕ್ಕೊಳಪಟ್ಟ ೧೨೦೦ ವಿದ್ಯಾರ್ಥಿಗಳಿಗೆ ಒಟ್ಟು ೪೫ ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮರವಿವಾರ ಬಂಟವಾಳ ಬಂಟರ ಭವನದ ಪಿ. ವಿ. ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು.
ಬೆಂಗಳೂರು ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಪ್ರತಿ ವರ್ಷ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ಹೊರ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ೭೫ ಶೇ.ರಷ್ಟು ಮಂದಿ ಬಡ ಕುಟುಂಬದ ಹಿನ್ನಲೆಯವರೇ ಆಗಿದ್ದು, ಹಾಗಾಗಿ ವಿದ್ಯಾರ್ಥಿಗಳು ತಮ್ಮೊಳಗಿನ ಋಣಾತ್ಮಕ ಯೋಚನೆಗಳನ್ನು ಬಿಟ್ಟು ಓದಿನತ್ತ ಹೆಚ್ಚಿನ ಗಮನ ವಹಿಸಬೇಕಿದೆ ಎಂದರು.
ಸಂಘದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಅವರು ಸಭಾಧ್ಯಕ್ಚತೆ ವಹಿಸಿ ಪ್ರಸ್ತಾವನೆಗೈದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಲ್ ಕಾರ್ಗೊ ಲಾಜಿಸ್ಟಿಕ್ಸ್ ನ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಡಾ| ನೀಲ್‌ರತನ್ ಶಿಂಧ ಅವರು ಭಾಗವಹಿಸಿ ಮಾತನಾಡಿ,
ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ಹೊರ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ೭೫ ಶೇ.ದಷ್ಟು ಮಂದಿ ಬಡ ಕುಟುಂಬದ ಹಿನ್ನಲೆಯವರೇ ಆಗಿದ್ದು, ಹೀಗಾಗಿ ವಿದ್ಯಾರ್ಥಿಗಳು ತಮ್ಮೊಳಗಿನ ಋಣಾತ್ಮಕ ಯೋಚನೆಗಳನ್ನು ಬಿಟ್ಟು ಓದಿನತ್ತ ಹೆಚ್ಚಿನ ಗಮನ ವಹಿಸಬೇಕಿದೆ ಎಂದರು.
ಆಲ್‌ಕಾರ್ಗೊ ಲಾಜಿಸ್ಟಿಕ್ಸ್ ಹಿರಿಯ ಪ್ರಧಾನ ವ್ಯವಸ್ಥಾಪಕ(ಸಿಎಸ್‌ಆರ್) ಡಾ| ನೀಲ್‌ರತನ್ ಶಿಂಧೆ ಮಾತನಾಡಿ,ವಿಕಸಿತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದ್ದು, ಅಲ್‌ಕಾರ್ಗೊ ಸಂಸ್ಥೆಯ ಮುಖ್ಯಸ್ಥ ಶಶಿಕಿರಣ್ ಶೆಟ್ಟಿ ಹಾಗೂ ಸಿಎಸ್‌ಆರ್ ವಿಭಾಗದ ಆರತಿ ಶೆಟ್ಟಿ ಅವರಿಗೆ ಮಂಗಳೂರು, ಬಂಟ್ವಾಳದ ಮೇಲೆ ವಿಶೇಷವಾದ ಪ್ರೀತಿ ,ಅಭಿಮಾನವನ್ನು ಹೊಂದಿದ್ದು, ಹೆಚ್ಚಿನ ಸಿಎಸ್‌ಆರ್ ಅನುದಾನ ನೀಡುತ್ತಿದ್ದಾರೆ ಎಂದರು.
ಇದೇ ವೇಳೆ ಎರಡು ಅಶಕ್ತ ಕುಟುಂಬಗಳಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವ ದತ್ತಿನಿಧಿಯಿಂದ ಸಹಾಯಧನ ವಿತರಿಸಲಾಯಿತಲ್ಲದೆ, ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಮನ್ಮಾನ್ ಮಲ್ಲಿ ಹಾಗೂ ಡಾ| ಅಧಿಶಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಜತೆ ಕಾರ್ಯದರ್ಶಿ ರಂಜನ್‌ಕುಮಾರ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರತಿಭಾ ಎ.ರೈ, ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್.ಭಂಡಾರಿ, ವಿದ್ಯಾರ್ಥಿ ವೇತನದ ಸಂಚಾಲಕ ಎಚ್.ಸಂಕಪ್ಪ ಶೆಟ್ಟಿ ವೇದಿಕೆಯಲ್ಲಿದ್ದರು.
ಚಂದ್ರಹಾಸ ರೈ ಬಾಲಾಜಿಬೈಲು, ಪ್ರಕಾಶ್ಚಂದ್ರ ಆಳ್ವ ಪಿ, ರಮಾ ಎಸ್.ಭಂಡಾರಿ, ವಿದ್ಯಾ ಎ.ರೈ ವಿದ್ಯಾರ್ಥಿಗಳ ವಿವರ ನೀಡಿದರು. ದಿವ್ಯಾ ಶೆಟ್ಟಿ ಹಾಗೂ ಮಣಿಮಾಲ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ಸಂಘದ ಮಾಜಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಸ್ವಾಗತಿಸಿದರು. ಕೋಶಾಧಕಾರಿ ಲೋಕೇಶ್ ಶೆಟ್ಟಿ ಕೆ. ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರ್ವಹಿಸಿದರು.