Published On: Fri, Sep 27th, 2024

ಉಡುಪಿ: ಈಜಿಕೊಂಡು ಹೊಳೆ ದಾಟಿ ವಿದ್ಯುತ್​​ ಸಮಸ್ಯೆ ಬಗೆಹರಿಸಿದ ಮೆಸ್ಕಾಂ ಸಿಬ್ಬಂದಿ ಪ್ರಮೋದ್

ಹೆಬ್ರಿ: ಮೆಸ್ಕಾಂ ಸಿಬ್ಬಂದಿಗಳು ಒಂದು ರೀತಿ ದೇಶ ಕಾಯುವ ಯೋಧರಂತೆ, ಯಾವ ಸಮಯದಲ್ಲೂ, ಎಲ್ಲದರೂ, ಸೇವೆ ನೀಡಲು ಮುಂದಾಗುತ್ತಾರೆ. ಇದೀಗ ಇದಕ್ಕೆ ಸಾಕ್ಷಿ ಹೆಬ್ರಿಯ ಲೈನ್​​​ ಮ್ಯಾನ್​​​​. ಈ ಬಗ್ಗೆ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ವಿದ್ಯುತ್ ಕಂಬದಲ್ಲಿ ಸಮಸ್ಯೆ ಇರುವುದನ್ನು ಅರಿತ ಸಿಬ್ಬಂದಿ ಹಗ್ಗ ಹಿಡಿದು ಹೊಳೆ ದಾಟಿ ದುರಸ್ತಿ ಕಾರ್ಯ ಮಾಡಿದ್ದಾರೆ. ಇದೀಗ ಇವರ ಈ ಕಾರಣಕ್ಕೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಮೂಡ್ಸಾಲಿ ಗ್ರಾಮದಿಂದ ಸ್ಥಳೀಯರು ಕರೆ ಮಾಡಿ ನಮ್ಮ ಊರಿಗೆ ಕರೆಂಟ್​​​ ಇನ್ನು ಬಂದಿಲ್ಲ ಎಂದು ಮೆಸ್ಕಾಂಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೆಬ್ರಿ ಶಾಖೆಯ ಮೆಸ್ಕಾಂ ಸಿಬ್ಬಂದಿ ಪ್ರಮೋದ್ ಸಮಸ್ಯೆಗೆ ಪರಿಹಾರ ನೀಡಲು ಸ್ಥಳಕ್ಕೆ ಧಾವಿಸಿ, ತಕ್ಷಣವೇ ಹೊಳೆ ದಾಟಿ ಸಮಸ್ಯೆಯನ್ನು ಸರಿ ಮಾಡಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಪ್ರಮೋದ್ ದಾವಣಗೆರೆಯ ಚನ್ನಗಿರಿ ಮೂಲದವರು, ಅರೆಕಾಲಿಕ ಸಹಾಯಕ ಸುಧೀರ್ ಅವರೊಂದಿಗೆ ಈಜಿಕೊಂಡು ಹೊಳೆ ದಾಟಿ ಹಾನಿಗೀಡಾದ ಲೈನ್ ಸರಿಪಡಿಸಿದ್ದಾರೆ. ಹಲವಾರು ದಿನಗಳಿಂದ ವಿದ್ಯುತ್ ಇಲ್ಲದೆ ಕಂಗೆಟ್ಟಿದ್ದ ಜನರಿಗೆ ಬೆಳಕು ನೀಡಿದ್ದಾರೆ ಎಂದು ಹೇಳಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter