ಬಂಟ್ವಾಳ: ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಗೆ 5.62ಲಕ್ಷ ಲಾಭ :ಅಧ್ಯಕ್ಷ ರೈ
ಬಂಟ್ವಾಳ :ಬಂಟ್ವಾಳ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು ಕಳೆದ ಸಾಲಿನಲ್ಲಿ ರೂ 21ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ 5.62ಲಕ್ಷ ರೂ.ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 5 ಲಾಭಾಂಶ ವಿತರಿಸುತ್ತಿದೆ ಎಂದು ಸೊಸೈಟಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಮಾಣಿ, ಲೊರೆಟ್ಟೊ ಮತ್ತು ಬಿ.ಸಿ.ರೋಡಿನಲ್ಲಿ ಮೂರು ಶಾಖೆ ಹೊಂದಿರುವ ಸೊಸೈಟಿಯು ಮುಂದಿನ ದಿನಗಳಲ್ಲಿ ಸಾಲೆತ್ತೂರು ಮತ್ತು ವಾಮದಪದವಿನಲ್ಲಿ ಶಾಖೆ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಮಹಿಳೆಯರಿಗೆ ಸುಲಭ ಸಾಲ ಸೇರಿದಂತೆ ವಾಹನ ಮತ್ತು ವೈಯಕ್ತಿಕ ಸಾಲ, ಜಮೀನು ಮತ್ತು ಚಿನ್ನಾಭರಣ ಅಡಮಾನ ಸಾಲ ವಿತರಿಸಲಾಗುತ್ತಿದ್ದು, ಹಲವಾರು ಮಂದಿಗೆ ಉದ್ಯೋಗ ನೀಡುತ್ತಿದೆ ಎಂದರು.
ಸಿಇಒ ಬೇಬಿ ಕುಂದರ್ ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ನಿರ್ದೇಶಕರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಸುದರ್ಶನ್ ಜೈನ್, ಅಬ್ಬಾಸ್ ಆಲಿ, ಆಲ್ಫೋನ್ಸ್ ಮಿನೇಜಸ್, ಅಮ್ಮು ಅರ್ಬಿಗುಡ್ಡೆ, ನಾರಾಯಣ ನಾಯ್ಕ್, ಎನ್.ವಾಣಿ ಕಾರಂತ್, ಮಂಜುಳಾ ಕುಶಲ ವೇದಿಕೆಯಲ್ಲಿದ್ದರು.ನಿರ್ದೇಶಕರಾದಎಂ.ಎಸ್.ಮಹಮ್ಮದ್ ಸ್ವಾಗತಿಸಿ, ಪಿಯೂಸ್ ಎಲ್.ರಾಡ್ರಿಗಸ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.