ಶಾಮಿಯಾನ ಮಾಲಕರ ಸಂಘದ “ಜಿಲ್ಲಾ ವಾರ್ಷಿಕ ಮಿಲನೋತ್ಸವ – 2024
ಬಂಟ್ವಾಳ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ (ರಿ.) ಬಂಟ್ವಾಳ ಘಟಕದ ಸಾರಥ್ಯದಲ್ಲಿ “ಜಿಲ್ಲಾ ವಾರ್ಷಿಕ ಮಿಲನೋತ್ಸವ – 2024” ಕಾರ್ಯಕ್ರಮದ ಪ್ರಯುಕ್ತ ಕ್ರೀಡಾಕೂಟ ಬಿ.ಸಿ.ರೋಡಿನ ಸ್ಲರ್ಶಾ ಕಲಾ ಮಂದಿರದಲ್ಲಿ ನಡೆಯಿತು.ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಅವರು
ಮಿಲನೋತ್ಸವವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಮಿಯಾನ ಮಾಲಕರ ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳುವ ಹಾಗೂ ಶಾಮಿಯಾನ ಮಾಲಕ, ಕಾರ್ಮಿಕರ ವ್ಯಕ್ತಿತ್ವವನ್ನು ಬೆಳೆಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಸಂಘ ಇದೀಗ ಜಿಲ್ಲಾ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದಿದೆ. ಪ್ರತಿಯೊಂದು ಉದ್ಯಮವು ಸಮಾಜದಲ್ಲಿ ಸಂಘಟನಾತ್ಮಕ ಅಭಿವೃದ್ಧಿ ಹೊಂದಿದಾಗ ಸಾಮಾಜಿಕವಾಗಿ ಗುರುತಿಸಲ್ಪಡುತ್ತದೆ ಎಂದು ತಿಳಿಸಿದರು.
ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಸಂಘದ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ,
ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಧನರಾಜ್ ಶೆಟ್ಟಿ,ಕ್ಯಾಟರಿಂಗ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ರಶೀದ್, ಡೆಕೋರೇಶನ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ತುಷಾರ್ ಸುರೇಶ್, ಜಿಲ್ಲಾ ಕೋಶಾಧಿಕಾರಿ ಬಾಲಕೃಷ್ಣ ಕದ್ರಿ, ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕೋಶಾಧಿಕಾರಿ ಮೈಕಲ್ ಡಿಕೋಸ್ತಾ, ಮಿಲನೋತ್ಸವ ಸಂಚಾಲಕ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ, ಸಹಸಂಚಾಲಕ ಐವನ್ ಡಿ.ಸೋಜ, ಚಂದ್ರಶೇಖರ್ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷರಿಗಳಾದ ಕ್ಲೇವರ್ ಡಿ.ಸೋಜ, ಶಿವಪ್ರಸಾದ್ ಹೆಗ್ಡೆ, ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷ ಶುಭಾಶ್ಚಂದ್ರ ಜೈನ್ ಸ್ವಾಗತಿಸಿ, ಕಾರ್ಯದರ್ಶಿ ಸುದೀರ್ ನಿರ್ಮಲ್ ವಂದಿಸಿದರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭವು ಶಾಮಿಯಾನ ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಕೆ.ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು. ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಬಹಿಮಾನ ವಿತರಿಸಲಾಯಿತು.
ಮೂರು ವರ್ಷ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಶಾಮಿಯಾನ ಮಾಲಕರ ಸಂಘದ ಮಾಜಿ ಅಧ್ಯಕ್ಷ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ ಅವರನ್ನು ಅಭಿನಂದಿಸಲಾಯಿತು.ಬಂಟ್ವಾಳ ತಾಲೂಕಿನ ಶಾಮಿಯಾನ ಮಾಲಕರ ಜೊತೆ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸಿದ ಐದು ಮಂದಿ ನೌಕರರಾದ ಶಶಿಧರ್ ಪೂಜಾರಿ, ಶ್ರೀಧರ್ ಸಪಲ್ಯ, ವಿಶ್ವನಾಥ ನಾಯ್ಕ, ಬಾಬು ನಾಯಕ್, ವೆಂಕಪ್ಪಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ಕೇಶವ ಅಮೈ , ರಾಜೇಶ್ ಎಂ. ಅಬ್ದುಲ್ ಲತೀಪ್, ಅಬ್ದುಲ್ ರಶೀದ್, ಫಾರೂಕ್ ಮಹಮ್ಮದ್, ದೀಪಾ ಕಾಮತ್, ಮೂಡಬಿದಿರೆಯ ಘಟಕದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಮಂಗಳೂರು ಘಟಕದ ಅಧ್ಯಕ್ಷ ಬಾಲಕೃಷ್ಣ ಕದ್ರಿ, ಬೆಳ್ತಂಗಡಿ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ವಿಟ್ಲ ಘಟಕದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕೋಶಾಧಿಕಾರಿ ಮೈಕಲ್ ಡಿಕೋಸ್ತಾ, ಮಿಲನೋತ್ಸವ ಸಂಚಾಲಕ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ, ಸಹಸಂಚಾಲಕ ಐವನ್ ಡಿ.ಸೋಜ, ಚಂದ್ರಶೇಖರ್ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷರಿಗಳಾದ ಕ್ಲೇವರ್ ಡಿ.ಸೋಜ, ಶಿವಪ್ರಸಾದ್ ಹೆಗ್ಡೆ, ಅಬ್ದುಲ್ ಲತೀಫ್, ಜಿಲ್ಲಾ ಉಪಾಧ್ಯಕ್ಷ ಶುಭಾಶ್ಚಂದ್ರ ಜೈನ್ ಕಾರ್ಯದರ್ಶಿ ಸುದೀರ್ ನಿರ್ಮಲ್ ಉಪಸ್ಥಿತರಿದ್ದರು.
ಬಂಟ್ವಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ವಾಗತಿಸಿ, ಮಿಲನೋತ್ಸವ ಸಂಚಾಲಕ ಪಿಯುಸ್ ಮ್ಯಾಕ್ಸಿಂ ಸ್ವಿಕೇರಾ ವಂದಿಸಿದರು.