ಪೊಳಲಿ: ಬ್ಯಾಂಕ್​​ ಆಫ್ ಬರೋಡಾ ಪೊಳಲಿ ಶಾಖೆಯ ವತಿಯಿಂದ ಇಂದು ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಯಿತು. ಈ ಮೂಲಕ ಸ್ವಚ್ಛತೆ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿದೆ. ಸ್ವಚ್ಛ ಭಾರತ್​​​​ ಅಭಿಯಾನದ ಅಡಿಯಲ್ಲಿ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದ ಮೂಲಕ ಈ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲೀಡ್​​​ ಬ್ಯಾಂಕ್​ ಆದೇಶದ ಮೆರೆಗೆ ಎಲ್ಲ ಬ್ಯಾಂಕ್​​​ ಈ ಅಭಿಯಾನದಲ್ಲಿ ಭಾಗವಹಿಸಲಿದೆ ಎಂದು ಪ್ರಾದೇಶಿಕ ಕಚೇರಿ ಮಂಗಳೂರು ಇದರ ಸಿಬ್ಬಂದಿ ಪ್ರಜ್ವಲ್ ಜೈನ್​​​​ ಮಾಹಿತಿ ನೀಡಿದರು.

ಇನ್ನು ಅಭಿಯಾನಕ್ಕೆ ಕರಿಯಂಗಳ ಗ್ರಾಮ ಪಂಚಾಯತ್​​​ ಸಹಕಾರವನ್ನು ನೀಡಿದೆ. ಇನ್ನು ಅಭಿಯಾನದಲ್ಲಿ ಬ್ಯಾಂಕ್​​ ಆಫ್ ಬರೋಡ ಪೊಳಲಿ ಶಾಖೆ ವ್ಯವಸ್ಥಾಪಕ ನಿತೀನ್​​ ರಾವ್​​​ ಹಾಗೂ ಬ್ಯಾಂಕ್​​ನ ಸಿಬ್ಬಂದಿಗಳು ಈ ಅಭಿಯಾನದಲ್ಲಿ ಭಾಗವಹಿಸಿರು. ಮತ್ತು ಗ್ರಾಮ ಪಂಚಾಯತ್​​​ನ ಕಾರ್ಯದರ್ಶಿ ಭಾರತಿ ರಾಜರಾಜೇಶ್ವರಿ ಮಹಿಳಾ ಮಂಡಲಿಯ ಸದಸ್ಯರು, ಪೊಳಲಿ ಭಾಗದ ಗ್ರಾಮಸ್ಥರು ಕೂಡ ಅಭಿಯಾನದಲ್ಲಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *