ಬಂಟ್ವಾಳ: ಭೂ ಅಭಿವೃದ್ಧಿ ಬ್ಯಾಂಕಿನ ಲಾಭಾಂಶಕ್ಕೆ
ಸಿಎಂ ಸಿದ್ಧರಾಮಯ್ಯ ಕಾರಣ: ಮಾಜಿ ಅಧ್ಯಕ್ಷ ಸುದರ್ಶನ್ ಜೈನ್
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಹೃದಯಭಾಗದಲ್ಲಿ ಕಳೆದ 62 ವರ್ಷಗಳ ಹಿಂದೆ ಆರಂಭಗೊಂಡ ಭೂ ಅಭಿವೃದ್ಧಿ ಬ್ಯಾಂಕ್ ಇದೇ ಪ್ರಥಮ ಬಾರಿಗೆ ರೂ 105 ಕೋಟಿ ಲಾಭ ಮತ್ತು ಸದಸ್ಯರಿಗೆ ಶೇ.11ರಷ್ಟು ಲಾಭಾಂಶ ವಿತರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಕಾರಣ ಎಂದು ಬ್ಯಾಂಕಿನ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,’ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ನಾವು ಸಲ್ಲಿಸಿದ ಮನವಿಯಂತೆ ‘ಅಸಲು ಪಾವತಿಸಿದ ರೈತರಿಗೆ ಬಡ್ಡಿ ಮನ್ನಾ ಯೋಜನೆ’ಯಡಿ ರೂ 74ಲಕ್ಷ ಮೊತ್ತದ ಅನುದಾನ ದೊರೆತಿದೆ. ಇದರಿಂದಾಗಿ ಒಟ್ಟು 103 ಮಂದಿ ರೂ 104 ಕೋಟಿ ಮೊತ್ತದ ಸಾಲ ಮರುಪಾವತಿಸಿ, ಬ್ಯಾಂಕಿಗೆ ಒಟ್ಟು ರೂ 178 ಲಕ್ಷ ಲಾಭವಾಗಿದೆ’ ಎಂದರು ಅವರು ವಿವರಿಸಿದರು.
ಆದರೆ ವಾಷರ್ಿಕ ಮಹಾಸಭೆ ಆಮಂತ್ರಣದಲ್ಲಿ ಮುಂಬರುವ ವರ್ಷಕ್ಕೆ ವಿಂಗಡಿಸಿದ ಲಾಭಾಂಶದಲ್ಲಿ ಕೇವಲ ರೂ 35 ಲಕ್ಷ ಎಂದು ನಮೂದಿಸಿರುವುದು ಏಕೆ…? ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಆಡಳಿತಾವಧಿಯಲ್ಲಿ ಬ್ಯಾಂಕಿಗೆ ಸ್ವಂತ ಕಟ್ಟಡ ನಿಮರ್ಿಸಿ ವಾಷರ್ಿಕ ರೂ 30ಲಕ್ಷ ಆದಾಯ ಸೇರಿದಂತೆ ಮಾಣಿಯಲ್ಲಿ ಶಾಖೆ ಆರಂಭಿಸಿದ್ದೇವೆ.
ಕಳೆದ ಚುನಾವಣೆಯಲ್ಲಿ ಮೃತರ ಹೆಸರಿನಲ್ಲೂ ಮತ ಪಡೆದ ಈಗಿನ ಆಡಳಿತ ಮಂಡಳಿ ಮಹಾಸಭೆಯಲ್ಲಿ ರೈತರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೆ ಕಾಟಾಚಾರಕ್ಕೆ ಮಹಾಸಭೆ ನಡೆಸಿದ್ದಾರೆ. ಬ್ಯಾಂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ರೈತರಿಗೆ ಕೋಟರ್ು ನೋಟೀಸು ಕಳುಹಿಸಿದ್ದಾರೆ. ಕಾಂಗ್ರೆಸ್ ನಿದರ್ೇಶಕರು ಇರುವ ಕೆಲವೆಡೆ ಅನಗತ್ಯ ಮೀಸಲಾತಿ ಬದಲಾಯಿಸಿ ರಾಜಕೀಯ ಮಾಡಿದ್ದಾರೆ.
ಸುಳ್ಯಕ್ಕೆ ವಗರ್ಾವಣೆಗೊಂಡ ಬ್ಯಾಂಕಿನ ಕಾರ್ಯದಶರ್ಿ ಮತ್ತೆ ಇಲ್ಲೇ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಬ್ಯಾಂಕಿನ ಅವ್ಯವಹಾರಗಳ ಬಗ್ಗೆ ಸಹಕಾರಿ ಇಲಾಖೆ ’64 ತನಿಖೆ’ ಆರಂಭಿಸಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಿದರ್ೇಶಕ ಚಂದ್ರಪ್ರಕಾಶ ಶೆಟ್ಟಿ, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಶಿವಪ್ಪ ಪೂಜಾರಿ, ಸೀತಾರಾಮ ಶೆಟ್ಟಿ, ಮಹಮ್ಮದ್ ನಂದಾವರ, ಮಧುಸೂಧನ ಶೆಣೈ ಇದ್ದರು