ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ವಾರ್ಷಿಕ ಮಹಾಸಭೆ
ಬಂಟ್ವಾಳ: ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿ. ಬಿ.ಸಿ ರೋಡ್ ಇದರ ವಾರ್ಷಿಕ ಮಹಾಸಭೆಯು ಭಾನುವಾರ ಮಹಾಮಂಡಲದ ಕಛೇರಿಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ ಸಂಜೀವ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ ಸಭೆಯನ್ನು ಸಂಘವು 33 ಕೋಟಿ ರೂಪಾಯಿ ವ್ಯವಹಾರ ಮಾಡಿ ೨೦೨೩-೨೪ ನೇ ಸಾಲಿನಲ್ಲಿ ೯ ಲಕ್ಷ ಲಾಭ ಪಡೆದಿದೆ. ನಷ್ಟದಲ್ಲಿದ್ದ ಮಹಾಮಂಡಲವು ಪ್ರಸ್ತುತ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಲಾಭದಾಯಕವಾಗಿ ನಡೆಯುತ್ತಿದೆ ಎಂದು ಸಭೆಗೆ ತಿಳಿಸಿದರು.

ಮುಂದಿನ ಹಂತದಲ್ಲಿ ಮಹಾಮಂಡಲದ ವತಿಯಿಂದ ಎರಡು ಶಾಖೆಗಳ ಕಾರ್ಯಯೋಜನೆಯಲ್ಲಿದ್ದು ಅನುಷ್ಠಾನಗೊಳಿಸಲಾಗುವುದು ಎಂದರು. ಮಹಾಮಂಡಲದ ಬೈಲಾ ಪ್ರಕಾರ ಎಲ್ಲಾ ಮೂರ್ತೆದಾರರ ಸಹಕಾರಿ ಸಂಘಗಳು ಕ್ಷೇಮನಿಧಿಯನ್ನು ಹೂಡಿಕೆ ಮಾಡಿ ಮಹಾಮಂಡಲದ ಅಭಿವೃದ್ಧಿಗೆ ಪ್ರಾಥಮಿಕ ಮೂರ್ತೆದಾರರ ಸಹಕಾರಿ ಸಂಘಗಳ ಕೊಡುಗೆ ಅಗತ್ಯವೆಂದು ತಿಳಿಸಿದರು. ಹಾಗೂ ಜಿಲ್ಲೆಯಲ್ಲಿ 100 ಮೂರ್ತೆದಾರರ ಸಂಘಗಳನ್ನು ತೆರೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
ಅಲಂಕಾರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷರು, ಕುಂಬ್ರ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಉಪ್ಪಿನಂಗಡಿಯ ಮುಖ್ಯಕಾರ್ಯನಿರ್ವಹಾಣಾಧಿಕಾರಿ, ಸಚಿಪಮುನ್ನೂರು ಮೂರ್ತೆದಾರರ ಮೂರ್ತೆದಾರರ ಮುಖ್ಯಕಾರ್ಯನಿರ್ವಹಾಣಾಧಿಕಾರಿ ಗಳು ಮಹಾಮಂಡಲದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸಲಹೆ ನೀಡಿದರು.
ದ.ಕ ಜಿಲ್ಲೆಯಲ್ಲಿ ಮೂರ್ತೆದಾರರ ಸಹಕಾರಿ ಸಂಘಗಳಲ್ಲಿ ಅತ್ಯುತ್ತಮ ವ್ಯವಹಾರ ಗಳಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಮೂರ್ತೆದಾರರ ಸಹಕಾರಿ ಸಂಘಗಳಲ್ಲಿ ಅಲಂಕಾರು ಮೂರ್ತೆದಾರರ ಸಹಕಾರಿ ಸಂಘ ಹಾಗೂ ಸಜಿಪ ಮುನ್ನೂರು ಮೂರ್ತೆದಾರರ ಸಹಕಾರಿ ಸಂಘಗಳಿಗೆ ದ.ಕ ಜಿಲ್ಲಾ ಅತ್ಯುತ್ತಮ ಮೂರ್ತೆದಾರರ ಸಹಕಾರಿ ಸಂಘ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಕುಮಾರ್ ವರದಿ ವಾಚಿಸಿದರು. ನಿರ್ದೇಶಕಿ ಶೈಲಜಾ ರಾಜೇಶ್ ಸ್ವಾಗತಿಸಿ, ಉಷಾಆಂಚನ್ ಪ್ರಶಸ್ತಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ರಾಜೇಶ್ ಸುವರ್ಣ ನಿರ್ದೇಶಕರಾದ ವಿಜಯ್ ಕುಮಾರ್ ಸೊರಕೆ, ಆರ್.ಸಿ. ನಾರಾಯಣ್, ಪುರುಷ ಎನ್. ಸಾಲ್ಯಾನ್, ಅಣ್ಣಿಯಾನೆ ನೋಣಯ್ಯ ಪೂಜಾರಿ, ವಿಶ್ವನಾಥ ಪೂಜಾರಿ ಪಂಜ, ಬೇಬಿ ಕುಂದರ್, ವಿಶ್ವನಾಥ ಬಿ., ಶಿವಪ್ಪ ಸುವರ್ಣ, ಪದ್ಮನಾಭ ಕೋಟ್ಯಾನ್, ಹರೀಶ್ ಪೂಜಾರಿ, ಗಣೇಶ್ ಪೂಜಾರಿ, ಉಷಾ ಆಂಚನ್, ಶೈಲಜಾ ಕೆ. ಹಾಗೂ ವಕೀಲರಾದ ಚಿದಾನಂದ ಎಮ್. ಉಪಸ್ಥಿತರಿದ್ದರು