Published On: Tue, Sep 24th, 2024

ಸಜೀಪ:ಮನೆಗೆ ಕಳ್ಳರ ಲಗ್ಗೆ:ನಗ-ನಗದು ಕಳವು

ಬಂಟ್ವಾಳ: ಮನೆ ಮಂದಿ ಇಲ್ಲದಾಗ, ಕಿಟಕಿ ಸರಳು ಬಗ್ಗಿಸಿ ಸುಮಾರು 1.25 ಲಕ್ಷ ರೂ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.


ಮನೆ ಮಾಲಕಿ ಜಯಲಕ್ಷ್ಮೀ ಎಂಬವರು ಸೆ.7ರಂದು ತನ್ನ ಮನೆಗೆ ಬೀಗ ಹಾಕಿ, ತಾಯಿ ಮನೆ ಪುತ್ತೂರು ಸಂಟ್ಯಾರ್ ಕೈಕಾರ್ ಎಂಬಲ್ಲಿಗೆ ಹೋಗಿರುತ್ತಾರೆ. ಸೆ.23ರಂದು ಸಂಜೆ ಮನೆಗೆ ವಾಪಾಸ್ ಬಂದಾಗ, ಮನೆಯ ಬಾಗಿಲಿನ ಡೋರ್ ಲಾಕ್ ಜಖಂಗೊಂಡಿತ್ತು. ಕಿಟಕಿಯ ಸರಳನ್ನು ಬಗ್ಗಿಸಿ ಜಖಂ ಮಾಡಿ ಯಾರೋ ಒಳ ಪ್ರವೇಶ ಮಾಡಿರುವುದು ಕಂಡುಬಂದಿತ್ತು. 

ಮನೆಯ ಹಿಂಬದಿ ಹೋಗಿ ನೋಡಿದಾಗ ಹಿಂಬದಿ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ, ಮನೆಯಲ್ಲಿದ್ದ ಗೋಡ್ರೇಜ್ ಮತ್ತು ಬೇಡ್ ರೂಂ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ, ಗೋದ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 2.5 ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25000 ರೂ ನಗದನ್ನು ಯಾರೋ ಕಳ್ಳರು ಕಳವು ಮಾಡಿಪರಾರಿಯಾಗಿದ್ದಾರೆ. ಕಳುವಾದ ಸೋತ್ತುಗಳ ಒಟ್ಟು ಮೌಲ್ಯ 1,25,000 ಆಗಬಹುದು ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter