ವಾಮದಪದವು ಪ್ರಾ.ಕೃ.ಪತ್ತಿನ ಸಹಕಾರಿ ಸಂಘ: ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.೧೦ ಡಿವಿಡೆಂಡ್: ಕಮಲ್ ಶೆಟ್ಟಿ
ಬಂಟ್ವಾಳ :ತಾಲೂಕಿನ ವಾಮದಪದವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವು ೨೦೨೩-೨೪ನೇ ಸಾಲಿನಲ್ಲಿ ೭೨.೫೧ಲಕ್ಷ ರೂ. ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಕಮಲ್ ಶೆಟ್ಟಿ ಬೊಳ್ಳಾಜೆ ಅವರು ಹೇಳಿದರು.ವಾಮದಪದವು ಪ್ರಾ.ಕೃ.ಪ.ಸ.ಸಂಘದ ಧಾರಿಣಿ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.೨೦೨೩-೨೪ ನೇ ಸಾಲಿನಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗಿದೆ. ಸಂಘವು ೨,೮೨೯ ಸದಸ್ಯರನ್ನು ಹೊಂದಿದ್ದು, ೫,೭೮೬.೪೪ ಕೋಟಿ ರೂ.ವ್ಯವಹಾರ ನಡೆಸಿದೆ. ಪಾಲು ಬಂಡವಾಳ ೨೯೭.೫೦ ಕೋಟಿ ರೂ. , ಠೇವಣಾತಿ ೨,೨೯೮.೫೦ ಕೋಟಿ ರೂ. ಕೇಂದ್ರ ಬ್ಯಾಂಕಿನ ಸಾಲಗಳು ೨೫೬೮.೫೦ಕೋಟಿ ರೂ. ಹೊಂದಿದೆ ಎಂದರು.
ಸಂಘದ ಹೊಸ ಕಚೇರಿ ಕಟ್ಟಡ, ಸಭಾಂಗಣ ಲೋಕಾರ್ಪಣೆ ಗೊಂಡಿರುತ್ತದೆ. ಸಂಘದ ರೈತ ಸದಸ್ಯರಿಗೆ ಸೇಫ್ ಲಾಕರ್ ಸೌಲಭ್ಯ,ಸಾಮಾನ್ಯ ಸೇವಾ ಕೇಂದ್ರ, ಸಾಲ ಪಡೆದ ರೈತರಿಗೆ ವಿಮಾ ಯೋಜನೆ, ಶುಭ ಸಮಾರಂಭಗಳಿಗೆ ಕಡಿಮೆ ದರದಲ್ಲಿ ಸಭಾಂಗಣ ಬಾಡಿಗೆ ನೀಡಲಾಗುವುದು ಎಂದರು.
ಸಂಘದಲ್ಲಿ ೧೮೮ ಸ್ವಸಹಾಯ ಗುಂಪುಗಳಿದ್ದು ಸ್ವಸಹಾಯ ಗುಂಪುಗಳ ಸಾಲ ೯೦.೭೯ ಕೋ.ರೂ., ಸದಸ್ಯರ ಹೊರಬಾಕಿ ಸಾಲ ೩, ೩೨೭.೭೩ ಕೋ.ರೂ., ಸಾಲ ವಸೂಲಾತಿ ಶೇಕಡಾ ೯೬.೪೫ ಆಗಿದೆ. ಸಂಘವು ಆಡಿಟ್” ಎ “ವರ್ಗೀಕರಣ ಪಡೆದಿದೆ ಎಂದರು. ಸಂಘದಲ್ಲಿ ಕ್ಯಾಂಪ್ಕೋ ಸಹಭಾಗಿತ್ವದಲ್ಲಿ ಅಡಿಕೆ ಖರೀದಿ ಹಾಗೂ ಕಾಳುಮೆಣಸು ಮತ್ತು ಹಾಪ್‌ಕಾಮ್ಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ತೆಂಗು ಖರೀದಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯವ್ಯಾಪ್ತಿಗೆ ಒಳಪಟ್ಟ ರೈತ ಸದಸ್ಯರ ಮಕ್ಕಳಿಗೆ ೨೦೨೩-೨೪ನೇ ಸಾಲಿನ ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.೯೦ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಹಾಗೂ ಶೇ.೮೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.ಸಂಘದ ರೈತ ಸದಸ್ಯರಿಗೆ ಪ್ರಕೃತಿವಿಕೋಪ ನಿಧಿಯಿಂದ ಸಹಾಯಧನ ವಿತರಿಸಲಾಯಿತು. ರೈತರ ಕ್ಷೇಮಾಭಿವೃದ್ದಿಗೆ ಸಹಾಯಧನ ವಿತರಿಸಲಾಯಿತು. ವಿಕಲ ಚೇತನ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು. ಸಂಘದ ಮರಣ ಹೊಂದಿದ ಸದಸ್ಯರಿಗೆ ಮರಣ ನಿಧಿಯನ್ನು ವಿತರಿಸಲಾಯಿತು. ಸಂಘದ ೨ ನವೋದಯ ಸ್ವಸಹಾಯ ಗುಂಪುಗಳಿಗೆ ಪ್ರಶಸ್ತಿ ಪತ್ರ ನೀಡಿ ಸಮ್ಮಾನಿಸಲಾಯಿತು.
ಸಂಘದ ನಿರ್ದೇಶಕರುಗಳಾದ ಧರ್ಣಪ್ಪ ನಾಯ್ಕ, ನಾಗರಾಜ ಶೆಟ್ಟಿ,ವೆಂಕಟೇಶ್ ಭಟ್, ಸುಽರ್ ಕುಮಾರ್ ಶೆಟ್ಟಿ , ಗಪಾಲಕೈಷ್ಣ ಶೆಟ್ಟಿ, ವಿವೇಕಾನಂದ ಪೂಜಾರಿ, ರೋಹಿಣಿ ಹಾಗೂ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಽ ಕೀರ್ತಿರಾಜ್ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ಸಂಜೀವ ಪೂಜಾರಿ ಸ್ವಾಗತಿಸಿದರು. ಸಿಬಂದಿ ನವೀನ್ ಶೆಟ್ಟಿ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಸಿ. ಡಿಸೋಜ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಸಂಘದ ನಿರ್ದೇಶಕ ಯಶೋಧರ ಶೆಟ್ಟಿ ವಂದಿಸಿದರು.