ಮಂಗಳೂರು: ಹಾಡಹಗಲೇ ಯುವತಿಯರಿಗೆ ಸೆಕ್ಸ್ ಆಫರ್ ನೀಡಿದ ವ್ಯಕ್ತಿ, ಬಟ್ಟೆ ಬಿಚ್ಚಿಸಿ ಪೊಲೀಸರಿಗೆ ಒಪ್ಪಿಸಿದ ಯುವತಿಯರು
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಇಂತಹ ದಂಧೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲೊಂದು ಗ್ಯಾಂಗ್ ಇದೆ. ಇದರ ಕೆಲಸವೇ ಇದು, ಇವರು ಟಾರ್ಗೆಟ್ ಇವರೇ ಯುವತಿಯರು. ಹೌದು ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಸೆಕ್ಸ್ ಆಫರ್ ನೀಡಿದ್ದಾರೆ. ಇದೀಗ ಈ ಬಗ್ಗೆ ಯುವತಿಯರು ಮಂಗಳೂರು ಪೊಲೀಸರಿಗೆ ಈ ಗ್ಯಾಂಗ್ನ ಒಬ್ಬ ವ್ಯಕ್ತಿಯನ್ನು ಒಪ್ಪಿಸಿದ್ದಾರೆ.
ಸೆಕ್ಸ್ ಆಫರ್ ನೀಡಿದ ಅಪರಿಚಿತನನ್ನು ಯುವತಿಯರು ತರಾಟೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಗಳೂರಿನ ನವಭಾರತ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಶಬರಿ ಎಂಬಾತನ ಮೇಲೆ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಇಂದು ಬೆಳಗ್ಗೆ 10.30 ರ ಸುಮಾರಿಗೆ ನಡೆದ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಬಳಿ ಹೋಗಿ ಹಣ ಕೊಡುತ್ತೇನೆ ಬರುತ್ತೀರಾ ಅಂತಾ ಕೇಳಿದ್ದಾನೆ. ತಕ್ಷಣ ಯುವತಿಯರು ಆತನಿಗೆ ಹಿಗ್ಗಾಮುಗ್ಗಾ ತರಾಟೆ. ತೆಗೆದುಕೊಂಡಿದ್ದಾರೆ. ಆತನನ್ನು ತಳ್ಳಿ ಶರ್ಟ್ ಬಿಚ್ಚಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.