ಕಕ್ಕೆ ಪದವಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪೂಂಜಾ ಲಕಟ್ಟೆ ವಲಯ ಇದರ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಕಕ್ಕೆ ಪದವಿನ ಶ್ರೀ ಪಂಚ ದುರ್ಗ ಪ್ರೌಢಶಾಲೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಹಾಸ ರೈ ವಹಿಸಿದ್ದರು.ಕೇಂದ್ರ ಒಕ್ಕೂಟದ ಅಧ್ಯಕ್ಷರು ಜನಜಾಗೃತಿ ವೇದಿಕೆ ಸದಸ್ಯರಾದ ಚಿದಾನಂದ ಕಕ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿ ಯಾದ ಆರ್ಥಿಕ ಆರೋಗ್ಯ ಸಾಕ್ಷರತೆಯ ಸಮಾಲೋಚಕಿ ಉಷಾ ನಾಯಕ್ ರವರು ವಿದ್ಯಾರ್ಥಿಗಳಿಗೆ ದುಶ್ಚಟದಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಸ್ವಾಸ್ತ್ಯ ಸಂಕಲ್ಪದ ಪ್ರತಿಜ್ಞೆ ಬೋಧಿಸಿದರು .
ಪುಂಜಾಲಕಟ್ಟೆ ವಲಯ ಮೇಲ್ವಿಚಾರಕಿ ಸವಿತಾ, ಸೇವಾಪ್ರತಿನಿಧಿ ಶೇಖರ್ ಸುಧಾ ಉಪಸ್ಥಿತರಿದ್ದರು.