ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಮಾಡಪಲ್ಕೆ ಎಂಬಲ್ಲಿ ಗ್ರಾ.ಪಂ. ವತಿಯಿಂದ ಸುಮಾರು ೧೭ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಹಿಂದೂ ರುದ್ರಭೂಮಿ   ಲೋಕಾರ್ಪಣೆ ಕಾರ್ಯಕ್ರಮ  ನಡೆಯಿತು.

ಗ್ರಾ.ಪಂ.ಅಧ್ಯಕ್ಷ ದೇವದಾಸ ಅಬುರ ಅವರು ನೂತನ ರುದ್ರಭೂಮಿಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿಯ ಕೊರತೆ ಇದ್ದು, ಸಮರ್ಪಕ ಹಿಂದೂ ರುದ್ರಭೂಮಿ ಇಲ್ಲದೆ ಗ್ರಾಮಸ್ಥರು ಶವ ದಫನಕ್ಕೆ ದೂರದ ಪುಂಜಾಲಕಟ್ಟೆ ರುದ್ರಭೂಮಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ನೆನೆಗುದಿಗೆ ಬಿದ್ದಿದ್ದ ರುದ್ರ ಭೂಮಿಯ ಕಾಮಗಾರಿಯನ್ನು ಪಂಚಾಯತ್‌ನ ಅನುದಾನವನ್ನು ಬಳಸಿಕೊಂಡು ಸಂಪೂರ್ಣಗೊಳಿಸಿದ್ದೇವೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ನನ್ನೊಂದಿಗೆ ಕೈಜೋಡಿಸಿದ್ದಾರೆ. ಮನುಷ್ಯನ ಅಂತಿಮ ಕಾರ್ಯ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ಅದಕ್ಕಾಗಿ ಇದನ್ನು ಪವಿತ್ರ ಕ್ಷೇತ್ರವೆಂದು ಪರಿಗಣಿಸಿ ವ್ಯವಸ್ಥೆಗೊಳಿಸಲಾಗಿದೆ ಎಂದರು.
ಕಟ್ಟಿಗೆ ದಾಸ್ತಾನು ಕೊಠಡಿಯನ್ನು ಗ್ರಾ.ಪಂ.ಸದಸ್ಯ ಸತೀಶ್ ಬಂಗೇರ ಹಾಗೂ ಪ್ರಗತಿಪರ ಕೃಷಿಕ ಗುಣಶೇಖರ ಕೊಡಂಗೆ ಉದ್ಘಾಟಿಸಿದರು. ಕಚೇರಿ ಕೊಠಡಿಯನ್ನು ಗ್ರಾ.ಪಂ.ಮಾಜಿ ಉಪಾಧ್ಯಕ್ಷ , ಹಾಲಿ ಸದಸ್ಯ ಡೀಕಯ ಬಂಗೇರ ಕರ್ಲ ಅವರು ಉದ್ಘಾಟಿಸಿದರು. ವಿಶ್ರಾಂತಿ ಕೊಠಡಿಯನ್ನು ಗ್ರಾ.ಪಂ.ಉಪಾಧ್ಯಕ್ಷೆ ಸುಗಂಧಿ ಉದ್ಘಾಟಿಸಿದರು. ಬಂಟ್ವಾಳ ಪಂಚಾಯತ್‌ರಾಜ್ ಇಂಜಿನೀಯರಿಂಗ್ ಉಪವಿಭಾಗದ ಕಿರಿಯ ಅಭಿಯಂತರ ಕೃಷ್ಣ ಮಾನಪ್ಪ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಧಿಕಾರಿ ಬಾಲಕೃಷ್ಣ, ಗ್ರಾ.ಪಂ.ಸದಸ್ಯರಾದ ಜಾನ್ ಸೇರಾ, ಆಸ್ಮಾ, ಸುರೇಶ್ ಬಾರ‍್ದೊಟ್ಟು,ಉಷಾ ಕೇಲ್ದಬಲ್, ಕಜೆಕಾರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ರೋಹಿನಾಥ್ ಕಂರ್ಬಡ್ಕ, ನಿರ್ದೇಶಕ ದಿನೇಶ್ ಜೆಂಕ್ಯಾರು, ಬಡಗಕಜೆಕಾರು ಸ.ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ಪಟ್ರಾಡಿ, ಗ್ರಾಮ ಆಡಳಿತಾಧಿಕಾರಿ ಪ್ರವೀಣ್, ಯೋಜನೆಯ ಸೇವಾ ಪ್ರತಿನಿಽಗಳಾದ ಸುಧಾ, ಸವಿತಾ,ಪ್ರಮುಖರಾದ  ಕೇಶವ ಪ್ರಭು, ಶ್ರೀ ಕ್ಷೇ.ಧ ಗ್ರಾ.ಯೋಜನೆ ಸದಸ್ಯರು, ಗ್ರಾಮಸ್ಥರು, ಸಿಬಂದಿ ವರ್ಗ ಉಪಸ್ಥಿತರಿದ್ದರು.
ಪಿಡಿಒ ದೇವಕಿ ಸ್ವಾಗತಿಸಿದರು. ಗುತ್ತಿಗೆದಾರ ಯಶವಂತ ಪ್ರಸ್ತಾವಿಸಿ, ವಂದಿಸಿದರು.

By Suddi9

Leave a Reply

Your email address will not be published. Required fields are marked *