ಪ್ರಧಾನಿ ಮೋದಿಯವರ ಜನ್ಮದಿನಾಚರಣೆ: ವಿಶೇಷ ಪೂಜೆ
ಬಂಟ್ವಾಳ: ಪ್ರಧಾನಮಂತ್ರಿ, ವಿಶ್ವ ನಾಯಕ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಪ್ರಯುಕ್ತ ಅವರಿಗೆ ಆಯುರಾರೋಗ್ಯ ಪ್ರಾಪ್ತಿಯಾಗಲೆಂದು ಬಿಜೆಪಿ ಮಂಚಿ ಶಕ್ತಿ ಕೇಂದ್ರದ ವತಿಯಿಂದ ಮೋಂತಿ ಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ,ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೇಶವರಾವ್ ನೂಜಿಪ್ಪಾಡಿ, ಮಂಚಿ ಶಕ್ತಿ ಕೇಂದ್ರದ ಪ್ರಮುಖರಾದ ಮೋಹನದಾಸ್ ಶೆಟ್ಟಿ ಪುದ್ದೋಟು,ಮಂಡಲ ಸಮಿತಿ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಮಂಚಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ್ ಶೆಟ್ಟಿ ನಾಡಾಜೆ, ಪುಷ್ಪಾ ಎಸ್ ಕಾಮತ್, ಪ್ರಮೀಳಾ, ಉಷಾ ಎಸ್ ಶೆಟ್ಟಿ, ಬೂತ್ ಸಮಿತಿ ಅಧ್ಯಕ್ಷರಾದ ದಿನೇಶ್ ಸಾಲಿಯಾನ್ ಮೋಂತಿಮಾರು, ಶಿವರಾಮ ರೈ ಮೇರಾವು, ಬೂತ್ ಸಮಿತಿ ಕಾರ್ಯದರ್ಶಿ ಜಗದೀಶ ಶೆಟ್ಟಿ ನೋಳ, ಪ್ರಮುಖರಾದ ಯೋಗೀಶ್ ಕುಲಾಲ್ ನೋಳ, ಗಣೇಶ್ ಮೋಂತಿಮಾರು, ದಯಾನಂದ ಪಡೀಲ್, ಬಾಲಚಂದ್ರ ನಾಯಕ್ ಕೇಪು, ಆನಂದ ಪ್ರಭು ಮೋಂತಿಮಾರು, ಶಂಕರ ನಾಯಕ್ ನಿರ್ಬೈಲ್, ಉದಯಶಂಕರ್ ನಿರ್ಬೈಲ್, ಪ್ರವೀಣ ಮನೆವಾರ್ತೆ, ಅಶೋಕ ನಾಯಕ್ ನಾಡಾಜೆ ಮತ್ತಿತರರಿದ್ದರು.