ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ:30.26 ಲಕ್ಷ ರೂಪಾಯಿ ಲಾಭ : ಹರಿಕೃಷ್ಣ ಬಂಟ್ವಾಳ
ಬಂಟ್ವಾಳ:ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ) ಪ್ರಸಕ್ತ ಸಾಲಿನಲ್ಲಿ 30.26 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ಅಧ್ಯಕ್ಷರಾದ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ನಡೆದ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಿದರು.

ಸಂಘವು ಪ್ರಸ್ತುತ 5 ಶಾಖೆಗಳನ್ನು ಹೊಂದಿದ್ದು, 2023-24 ನೇ ಸಾಲಿನಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು ವಿವಿಧ ಯೋಜನೆಗಳ ಮೂಲಕ ಸದಸ್ಯರಿಂದ 25 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ 22 ಕೋಟಿಗೂ ಮಿಕ್ಕಿ ಸಾಲ ನೀಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಸಂಘದ ಪ್ರಗತಿಗೆ ಸದಸ್ಯರ ಸಂಪೂರ್ಣ ಸಹಕಾರಕ್ಕೆ ಶ್ರೀ ಗುರು ಸೊಸೈಟಿ ಸದಾ ಋಣಿಯಾಗಿರುತ್ತೇವೆ ಎಂದು ಹೇಳಿದ ಹರಿಕೃಷ್ಣ ಬಂಟ್ವಾಳ್ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ ಸಿಬ್ಬಂದಿ ವರ್ಗ ದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಮುಂದಕ್ಕೆ ಸಂಘ ಹಾಕಿಕೊಂಡಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಎಲ್ಲಾ ಸದಸ್ಯರ ಸಹಕಾರ ಕೋರಿದರಲ್ಲದೆ ವರದಿ ಸಾಲಿನಲ್ಲಿ 89.77 ಲಕ್ಷ ಪಾಲು ಬಂಡವಾಳ,ರೂ 20 ಕೋಟಿ ವಿವಿಧ ಠೇವಣಿ ಸಂಗ್ರಹಿಸಿ 18 ಕೋಟಿ ಸಾಲ ನೀಡಲಾಗಿದೆ ಅವರು ಹೇಳಿದರು..
ಸಂಘದ ಸದಸ್ಯರ ಆರ್ಹ 104 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು,
ಇದೇ ವೇಳೆ ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕರಾದ ಉಮೇಶ್ ಸುವರ್ಣ ತುಂಬೆ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.ಮೆಲ್ಕಾರ್ ಶಾಖೆಯ ಪಿಗ್ಮಿ ಸಂಗ್ರಹಕರಾದ ಆನಂದ ಪೂಜಾರಿ ಕೆಲ್ದೋಡಿ ಅವರನ್ನು ಸನ್ಮಾನಿಸಲಾಯಿತು..
ನಿರ್ದೇಶಕರಾದ ಸಂಜೀವ ಪೂಜಾರಿ ಕುಚ್ಚಿಗುಡ್ಡೆ , ಭುವನೇಶ್ ಪಚ್ಚಿನಡ್ಕ , ರತ್ನಾಕರ ಪೂಜಾರಿ ಮೆಲ್ಕಾರ್, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ತುಳಸಿ ಇರಾ , ಲಕ್ಷ್ಮೀ ಪೆರ್ವ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್ ಗತವರ್ಷದ ಸಾಲಿನ ವರದಿ,ಲೆಕ್ಕಪತ್ರ ಮಂಡಿಸಿದರು, ಉಪಾಧ್ಯಕ್ಷರಾದ ರಮೇಶ್ ಅನ್ನಪಾಡಿ ಸ್ವಾಗತಿಸಿ ನಿರ್ದೇಶಕರಾದ ರತ್ನಾಕರ ಪೂಜಾರಿ ನಾಡರು ವಂದಿಸಿದರು.