ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಪುದು ಮಹಾ ಶಕ್ತಿ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ  ಜನ್ಮದಿನದ ಪ್ರಯುಕ್ತ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ವಿಶೇಷ ಪೂಜೆ ನಡೆಯಿತು.

ಪ್ರಧಾನಿಯವರಿಗೆ ದೀರ್ಘ ಆಯುಷ್ಯ ಹಾಗೂ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು. ಬಳಿಕ  ಸಿಹಿ ತಿಂಡಿ ಹಂಚಿ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು 

ಈ ಸಂದರ್ಭ ಬಿಜೆಪಿ ಮಂಡಲದ ಉಪಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಮಹಾ ಶಕ್ತಿ ಕೇಂದ್ರದ ಪ್ರಭಾರಿ ಭರತ್ ರಾಜ್ ಗಟ್ಟಿ, ವೈಷ್ಣವಿ ಎಂಟರ್ ಪ್ರೈಸಸ್ ಮಾಲಕ ಹಾಗೂ ಪುದು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರ ಜಗನ್ನಾಥ ಸಾಲಿಯಾನ್ ತುಂಬೆ, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ತೇವು, ಪ್ರಮುಖರಾದ ಸುಬ್ರಹ್ಮಣ್ಯ ಭಟ್ ನೆತ್ರಕೆರೆ,  ಲಿಂಗಪ್ಪ ಕುಲಾಲ್ ತುಂಬೆ, ಸದಾನಂದ ತುಂಬೆ, ಮನೋಹರ್ ಪೆರ್ಲಕೆ , ಸುರಭೀ ಸ್ಟೀಲ್ಸ್ ನ ಮಾಲಕ ನವೀನ್ ಕೊಡ್ಮಣ್, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *