ವಾಮದಪದವು ಹಾ. ಉ. ಸ. ಸಂಘಕ್ಕೆ 17.31 ಲಕ್ಷ ರೂ.ಲಾಭ: ಚೌಟ
ಬಂಟ್ವಾಳ: ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ15.68 ಕೋಟಿ ರೂ. ವ್ಯವಹಾರ ನಡೆಸಿ 17.31 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಚೌಟ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ. 15 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 87 ಪೈಸೆ ಬೋನಸ್ ಘೋಷಿಸಿದರು. ಸದಸ್ಯರ ಷೇರು ಡಿವಿಡೆಂಡ್‌ನ್ನು ಸಂಘದ ಕಟ್ಟಡ ನಿಧಿಗೆ ವರ್ಗಾಯಿಸಲು ಸದಸ್ಯರು ಈ ಸಂದರ್ಭದಲ್ಲಿ ಒಪ್ಪಿಗೆ ಸೂಚಿಸಿದರು.
ದ.ಕ ಹಾಲು ಒಕ್ಕೂಟದ ಬಿ.ಸಿ ರೋಡ್ ಪಶುವೈದ್ಯಾಧಿಕಾರಿ ಡಾ.ಚರಣ್ ರವರು ಚಾನುವಾರು ವಿಮೆ. ಕರು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದರು. ವಿಸ್ತರಾಣಾಧಿಕಾರಿ ಜಗದೀಶ್ ರವರು ಒಕ್ಕೂಟದ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಎಂ.ಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಆಶ್ರಯ್ ಎ ಹಾಗೂ ವಾಣಿಜ್ಯ ಶಾಸ್ತ್ರದಲ್ಲಿ ತೃತೀಯ ರ್ಯಾಂಕ್ ಗಳಿಸಿದ ಅನನ್ಯ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಶ್ಯಾಮ ಪ್ರಸಾದ್ ಪೂಂಜಾ, ನಿರ್ದೇಶಕರುಗಳಾದ ಪ್ರಕಾಶ ಶೆಟ್ಟಿ, ಬೇಬಿ ಗೌಡ, ಗಣನಾಥ ಶೆಟ್ಟಿ ಉದಯ ಕುಮಾರ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಭುವನೇಶ್ವರ ಶೆಟ್ಟಿ, ಪ್ರಶಾಂತ್ ಪೂಜಾರಿ, ರೇಣುಕಾ ರೈ, ವಿನಿತಾ, ಪ್ರೇಮ, ರಮಾನಂದ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಶೆಟ್ಟಿ ಅವರು ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು. ಕೊನೆಯಲ್ಲಿ ವಂದಿಸಿದರು.