ಉಳ್ಳಾಲ: ಅಕ್ರಮ ಜಾನುವಾರು ಸಾಗಾಟ ಮತ್ತು ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಚೆಂಬುಗುಡ್ಡೆ ಕಸಾಯಿಖಾನೆಯ ಮಾಲಕ ಹಾಗೂ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಚೆಂಬುಗುಡ್ಡೆ ನಿವಾಸಿಗಳಾದ ಎಂ.ಸಿ.ಬಾವಾ, ಅಬ್ದುಲ್ ಸಲೀಂ ಮತ್ತು ಹರೇಕಳ ಆಲಡ್ಕ ನಿವಾಸಿ ಕಾಸಿಂ ಎಂದು ಹೆಸರಿಸಲಾಗಿದೆ. ಇವರು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ನಡೆಸಿ ಕಳವುಗೈದ ಜಾನುವಾರುಗಳನ್ನು ಹತ್ಯೆ ನಡೆಸಿ ಮಾಂಸ ಮಾರಾಟ ಮಾಡುತ್ತಿದ್ದರು.

ಕೆಲದಿನಗಳ ಹಿಂದೆ ಚೆಂಬುಗುಡ್ಡೆ ಕಸಾಯಿಖಾನೆಗೆ ಭಜರಂಗದಳದ ಮಾಹಿತಿಯಂತೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು 21 ಜಾನುವಾರು ಸಹಿತ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಆರೋಪಿಗಳು ಪರಾರಿಯಾಗಿದ್ದರು. ಮತ್ತೆ ಎರಡು ದಿನಗಳ ಹಿಂದೆ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಿಂದ ಜಾನುವಾರು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಚೆಂಬುಗುಡ್ಡೆ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು 50 ಕೆ.ಜಿ. ದನದ ಮಾಂಸ ಹಾಗೂ ಆಯುಧಗಳನ್ನು ವಶಪಡಿಸಿಕೊಂಡಿದ್ದರು.
ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಪ್ರಮುಖ ಆರೋಪಿ ಎಂ.ಸಿ. ಖಾದರ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಉಳ್ಳಾಲ ಠಾಣಾ ನಿರೀಕ್ಷಕ ಸವಿತ್ರ ತೇಜ ಅವರ ನಿದರ್ೇಶನದಡಿ ನಡೆದ ಕಾಯರ್ಾಚರಣೆಯಲ್ಲಿ ಕ್ರೈಂ ಎಸ್.ಐ ರಾಜೇಂದ್ರ.ಬಿ, ಎಎಸ್ಐ ಮೋಹನ್ ದಾಸ್, ವಿಜಯರಾಜ್ ಹಾಗೂ ಸಿಬ್ಬಂದಿ ಮೋಹನ್, ರಂಜಿತ್, ಕಮಲಾಕ್ಷ, ಪ್ರಶಾಂತ್, ಲಿಂಗರಾಜ್ ಭಾಗವಹಿಸಿದ್ದರು.


