ವಿದ್ಯಾಥರ್ಿನಿ ಚುಡಾಯಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಪ್ರಕರಣ
ಮಂಗಳೂರು: ಶಾಲಾ ವಿದ್ಯಾಥರ್ಿನಿಗೆ ಮೊಬೈಲ್ ನಂಬರ್ ಬರೆದಿದ್ದ ಚೀಟಿಯನ್ನು ಎಸೆದು ಆಕೆ ಸ್ಪಂದಿಸದಿದ್ದಾಗ ಆಕೆಯನ್ನು ತಡೆದು ಕೈ ಹಿಡಿದೆಳೆದು ಚುಡಾಯಿಸಿದ್ದ ಆರೋಪಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಠಾಣಾ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೋಳಿಯಾರು-ಕುಕ್ಕೊಟ್ಟು ನಿವಾಸಿಗಳಾದ ಫಾರೂಕ್ ಅಲಿಯಾಸ್ ಉಮರ್ ಫಾರುಕ್(40), ಸಿನಾನ್ ಅಲಿಯಾಸ್ ಮುಹಮ್ಮದ್ ಸಿನಾನ್(19), ಜಾಫರ್ ಅಲಿಯಾಸ್ ಜಾವುದ್ದೀನ್(18), ಅನ್ಸಾರ್ ಅಲಿಯಾಸ್ ಅನ್ಸಾರ್ ಶಾಫಿ(22), ಶಾಹುಲ್ ಅಲಿಯಾಸ್ ಶಾಹುಲ್ ಹಮೀದ್(20), ಫಯಾಜ್(21), ಕಬೀರ್(22) ಎಂದು ಹೆಸರಿಸಲಾಗಿದೆ.
ಆರೋಪಿ ರಾಜೇಶ್ ನಾಯ್ಕ್ ವಿರುದ್ಧ ಬಾಲಕಿಯ ಮನೆಮಂದಿ ದೂರು ನೀಡಿದ್ದರೆ, ರಾಜೇಶ್ ಕೂಡಾ ಹಲ್ಲೆಕೋರರ ವಿರುದ್ಧ ಕೊಣಾಜೆ ಠಾಣೆಗೆ ದೂರು ನೀಡಿದ್ದ. ಆರೋಪಿಗಳು ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದಾರೆ.
