ಮಂಗಳೂರು: ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಎಂಟು ಮಂದಿ ಸಹಚರರನ್ನು ಮಂಗಳೂರು ಸಿಸಿಬಿ ಪೊಲೀಸ್ ತಂಡ ಗುರುವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ವಿಕ್ಕಿ ಶೆಟ್ಟಿ ಯಾನೆ ಮನೋಜ್, ರಾಘವೇಂದ್ರ ಯಾನೆ ರಘು ಎಂಬವರಿದ್ದ ತಂಡ ತಣ್ಣೀರುಬಾವಿಯ ಹತ್ತಿರ ಶ್ರೀಮಂತ ವ್ಯಕ್ತಿಯೋರ್ವರನ್ನು ದರೋಡೆ ಮಾಡಲು ಸ್ಕೆಚ್ ಹಾಕುತ್ತಿದ್ದು ಮತ್ತು ಬಿಜೈ ರಾಜ ಕೊಲೆಯಲ್ಲಿ ಭಾಗಿಯಾಗಿದ್ದ ಬೊಕ್ಕಪಟ್ಣ ನಿವಾಸಿ ಭರತೇಶ್ ಎಂಬಾತನನ್ನು ಕೊಲೆ ಮಾಡುವ ಸಂಚು ಹೂಡಿದ್ದ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಕ್ಷಿಪ್ರ ಕಾಯರ್ಾಚರಣೆ ನಡೆಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುರತ್ಕಲ್-ಸದಾಶಿವ ನಗರದ ನಿವಾಸಿ ಮನೋಜ್(38), ವಾಮಂಜೂರು ನಿವಾಸಿ, ರಾಘವೇಂದ್ರ ಅಲಿಯಾಸ್ ರಘು(30), ಬಜಾಲ್ ನಿವಾಸಿ ಸಂತೋಷ್ ಪೂಜಾರಿ ಅಲಿಯಾಸ್ ಪೊಲರ್ು ಸಂತು(33), ಜಪ್ಪಿನಮೊಗರು ನಿವಾಸಿ ಭರತೇಶ್(30), ಬೈಕಾಂಪಾಡಿ ನಿವಾಸಿ ನವೀನ್ ಅಲಿಯಾಸ್ ಮೈಕೆಲ್(26), ಸುರತ್ಕಲ್ ನಿವಾಸಿ ಸಂದೇಶ್ ಕಕರ್ೇರ(29), ಸುರತ್ಕಲ್ ನಿವಾಸಿ ಚೇತನ್ ಅಲಿಯಾಸ್ ಅನ್ನು(27), ಹೊಸಬೆಟ್ಟು ನಿವಾಸಿ ವಣರ್ಿತ್ ಶೆಟ್ಟಿ(30) ಎಂದು ಹೆಸರಿಸಲಾಗಿದೆ.
ಬಂಧಿತರಿಂದ ನಾಲ್ಕು ತಲವಾರು, ಒಂದು ಮಚ್ಚು, ಮೂರು ಚೂರಿ, 15,590 ರೂ. ಹಣ ಹಾಗೂ ಎಂಟು ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಮನೋಜ್ ಹಾಗೂ ನವೀನ್ ಎಂಬವರು ಸೈಮನ್ ಮಚಾದೋ ಕೊಲೆ ಪ್ರಕರಣ ಹಾಗೂ ಸಂದೀಪ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.
ಸಂದೀಪ್ ಕಕರ್ೇರಾ ಹಾಗೂ ಚೇತನ್ ಕೂಡಾ ಸಂದೀಪ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದರೆ, ರಾಘವೇಂದ್ರ ಕಾವೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಮುರುಗೇಶ್ ಹಾಗೂ ಉಪೇಂದ್ರ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದರು. ಭರತೇಶ್ ಹಾಗೂ ಸಂತೋಷ್ ಪೂಜಾರಿ ಮೇಲೆ ಕೋಮುದ್ವೇಷ, ಗಲಭೆ, ಹಲ್ಲೆ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಡಾ.ಕೆ.ವಿ.ಜಗದೀಶ್ ಮತ್ತು ಡಿಸಿಪಿ ವಿಷ್ಣುವರ್ಧನ ಅವರ ಮಾಹಿತಿಯ ಮೇರೆಗೆ ಮಂಗಳೂರು ಕಮಿಷನರ್ ಆರ್.ಹೀತೆಂದ್ರ ನೇತೃತ್ವದಲ್ಲಿ, ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
