ನಾಗಮಂಗಲದಲ್ಲಿ ಗಲಭೆ ಖಂಡಿಸಿ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ
ಬಂಟ್ಚಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಒಕ್ಕೂಟ ಬಂಟ್ವಾಳ ತಾಲೂಕು ಇದರ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಗಲಭೆಯನ್ನು ಖಂಡಿಸಿ ಹಾಗೂ ಈ ಸಂಬಂಧ ಆರೋಪಿಗಳ ಬಂಧಿಸಬೇಕು ಮತ್ತು ಘಟನೆಯ ಸಮಗ್ರ ತನಿಖೆಗೆ ಆಗ್ರಹಿಸಿ ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿ.ಹಿಂ.ಪ.ನ ಬಂಟ್ವಾಳ ಪ್ರಖಂಡದ ಅಧ್ಯಕ್ಷ,ನ್ಯಾಯವಾದಿ ಪ್ರಸಾದ್ ಕುಮಾರ್ ರೈ,ಹಿ.ಜಾ.ವೇ.ಯ ಮುಖಂಡ
ನರಸಿಂಹ ಮಾಣಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿದರಲ್ಲದೆ ನಾಗಮಂಗಲದಲ್ಲಿ ಗಲಭೆ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕಲ್ಲದೆ ಘಟನೆಯ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸಬೇಕೆಂದು ಒತ್ತಾಯಿಸಿದರು.
ಸಂಘಪರಿವಾರ ಸಂಘಟನೆಯ ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ, ಭರತ್ ಕುಮ್ಡೇಲು, ಸಮಿತ್ ರಾಜ್ ದರೆಗುಡ್ಡೆ, ಗುರುರಾಜ್ ಬಂಟ್ವಾಳ, ಸಂತೋಷ್ ಸರಪಾಡಿ,ಬಿಜೆಪಿ ಮುಖಂಡರಾಸ ಚೆನ್ನಪ್ಪ ಆರ್ .ಕೋಟ್ಯಾನ್, ದಿನೇಶ್ ಅಮ್ಟೂರು, ಸುದರ್ಶನ್ ಬಜ, ಪ್ರಭಾಕರ ಪ್ರಭು, ಗೋವಿಂದ ಪ್ರಭು, ಅನೂಪ್ ಮಯ್ಯ, ಚಿದಾನಂದ ಕುಜೀಲಬೆಟ್ಟು, ಸಂದೇಶ್ ಫರಂಗಿಪೇಟೆ, ಗಣೇಶ್ ಕಾಮಾಜೆ ಮೊದಲಾದವರಿದ್ದರು.