ಮಂಗಳೂರು: ದಕ್ಷಿಣ ಕನ್ನಡದ ವಿವಿಧೆಡೆ ಭಾರೀ ಮಳೆ, ಇಂದು ಮತ್ತು ನಾಳೆ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್
ದಕ್ಷಿಣ ಕನ್ನಡದ ವಿವಿಧೆಡೆ ಸೋಮವಾರ ಮಳೆಯಾಗಿದ್ದ, ಸಂಜೆ ಮತ್ತು ರಾತ್ರಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಕೊಂಚ ತೊಂದರೆ ಉಂಟಾಯಿತು. ಮಂಗಳವಾರ ಮತ್ತು ಬುಧವಾರ ಕರಾವಳಿ ಪ್ರದೇಶಕ್ಕೆ ಹಳದಿ ಅಲರ್ಟ್ ಘೋಷಿಸಲಾಗಿದ್ದು, ಇದೇ ರೀತಿಯ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ. ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 28.9 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 24.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸುಳ್ಯದಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಬೆಳ್ಳಾರೆ, ಪಂಜ, ಗುತ್ತಿಗಾರು, ಅರಂತೋಡು, ಸಂಪಾಜೆ, ಕೊಲ್ಲಮೊಗ್ರು, ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ, ಬಿಳಿನೆಲೆ ಸೇರಿದಂತೆ ಪ್ರದೇಶಗಳಲ್ಲಿ ದಿನವಿಡೀ ಸಾಧಾರಣ ಮಳೆಯಾಗಿದೆ.
ಉಡುಪಿ, ಬೈಂದೂರು, ಕಾರ್ಕಳ, ಕುಂದಾಪುರ, ಹೆಬ್ರಿ, ಕಾಪು ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಎಡಬಿಡದೆ ಮಳೆಯಾಗಿದ್ದು, ಭಾನುವಾರ ತಡರಾತ್ರಿ ಉಡುಪಿ ಮತ್ತು ಮಣಿಪಾಲದಲ್ಲಿ ಭಾರೀ ಮಳೆಯಾಗಿದೆ.