ತುಳುವರ ಬಹು ವರ್ಷದ ಕನಸು ಈಡೇರಿದೆ, ಯೂನಿಕೋಡ್ ಗೆ ತುಳುಲಿಪಿ ಸೇರ್ಪಡೆ
ಮಂಗಳೂರು: ತುಳುವರ ದಶಕಗಳ ಹೋರಾಟಕ್ಕೆ ಒದೊಂದಾಗಿ ಫಲ ಸಿಗುತ್ತಿದೆ. ತುಳು ಪಿಲಿ ಯೂನಿಕೋಡ್ನಲ್ಲಿ ಸೇರ್ಪಡೆಯಾಗಿದೆ. ಈ ಹಿಂದೆ ಗೂಗಲ್ ಅನುವಾದದಲ್ಲೂ ಕೂಡ ತುಳುವಿಗೆ ವಿಶೇಷ ಸ್ಥಾನ ನೀಡಿಲಾಗಿತ್ತು,. ಆದರೆ ಸರ್ಕಾರ ಮಾತ್ರ ತುಳು ಡಿಜಿಟಲ್ನಲ್ಲಿ ಸ್ಥಾನ ಪಡೆದು 18 ಪರಿಚ್ಛೇಧನೆಗೆ ಸೇರಿಸಲು ಹಿಂದೆ ಮುಂದೆ ನೋಡುತ್ತಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಭಾಷೆ ಈ ತುಳು. ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಈ ತುಳುಭಾಷೆ ಹೆಚ್ಚಾಗಿ ಚಾಲ್ತಿಯಲ್ಲಿದೆ. ಅದಲ್ಲದೇ, ಸರಿಸುಮಾರು ಹತ್ತನೇಯ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ಉಪಯೋಗಿಸುತ್ತಿದ್ದರು.
ಇದೀಗ ಇಂತಹ ಶ್ರೀಮಂತ ಭಾಷೆಯನ್ನು ತುಳು ಲಿಪಿಗಿರುವ ಇನ್ನೊಂದು ಹೆಸರಿನ ಮೂಲಕ ತುಳು ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದೆ. ಇನ್ನು ಮುಂದೆ ತುಳುಲಿಪಿಯಲ್ಲಿಯೇ ಪಠ್ಯಗಳನ್ನು ಓದಬಹುದಾಗಿದೆ. ಸಾಮಾನ್ಯವಾಗಿ ಇಂಗ್ಲಿಷ್, ಕನ್ನಡ ಸೇರಿದಂತೆ ಬೇರೆ ಯಾವ ಭಾಷೆಯಲ್ಲಿ ಶಬ್ದಗಳನ್ನು ಬರೆದರೆ, ಅದನ್ನು ತುಳುವಿನಲ್ಲಿ ಅನುವಾದಿಸುವ ಕೆಲಸವನ್ನು ಈ ಗೂಗಲ್ ಮಾಡುತ್ತದೆ. ಇದೀಗ ತುಳು ಲಿಪಿಯದ್ದೇ ಅಧಿಕೃತ ಫಾಂಟ್ ಕೀಲಿಮಣೆಯಲ್ಲಿ ಲಭ್ಯವಿದ್ದು, ಹೀಗಾಗಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತ್ತರ ಡಿಜಿಟಲ್ ವ್ಯವಸ್ಥೆಯಲ್ಲಿ ತುಳುಲಿಪಿಯನ್ನು ಓದುವ ಅವಕಾಶವೊಂದು ದೊರೆತಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ತುಳುವರ ಬಹು ವರ್ಷದ ಕನಸು ಈಡೇರಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ‘ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜೊತೆಗೆ ತುಳು ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಇನ್ನಷ್ಟು ಹೆಚ್ಚಿನ ಮಹತ್ವ ಬಂದಿದೆ’ ಎಂದಿದ್ದಾರೆ.