
ಮಂಗಳೂರಿನ ಸಂಘನಿಕೇತನದಲ್ಲಿ 77 ನೇ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕ್ರೈಸ್ತ ಧರ್ಮದ ಬಂಧುಗಳು ಗಣೇಶೋತ್ಸವದಲ್ಲಿ ಭಾಗಿಯಾಗಿದ್ದು, ಸೌಹಾರ್ದತೆಯ ಸಾಕ್ಷಿಯಾಗಿದೆ.
ಹೌದು, ಕಳೆದ 77 ವರ್ಷಗಳಿಂದ ಇಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆರ್ಎಸ್ಎಸ್ನ ಮಂಗಳೂರು ಕಚೇರಿಯಲ್ಲಿ ಈ ಬಾರಿ ಸೆ.11ರ ವರೆಗೆ ಐದು ದಿನಗಳ ಕಾಲ ಗಣೇಶೋತ್ಸವವು ನಡೆಯುತ್ತಲಿದೆ. ಕಳೆದ ಹತ್ತು ವರ್ಷಗಳಿಂದ ಸಂಘನಿಕೇತನ ಗಣೇಶೋತ್ಸವಕ್ಕೆ ಕ್ರೈಸ್ತ ಧರ್ಮಿಯರು ಆಗಮಿಸುತ್ತಿದ್ದು, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಿಂದ ಸಾಮರಸ್ಯದ ಭೇಟಿಯಾಗಿದೆ.
ಗಣೇಶನ ದರ್ಶನಕ್ಕೆ ಫಲ-ಪುಷ್ಪ ಹಿಡಿದುಕೊಂಡು ಆಗಮಿಸಿದ ಕ್ರೈಸ್ತ ಧರ್ಮಿಯರು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕ್ರೈಸ್ತ ಧರ್ಮದ ಬಂಧುಗಳನ್ನು ಗಣೇಶೋತ್ಸವ ಸಮಿತಿಯ ಪ್ರಮುಖರು ಸ್ವಾಗತಿಸಿದ್ದಾರೆ.
