ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ ಗಣೇಶೋತ್ಸವ ಮೆರವಣಿಗೆ ಎಂದು ಹೇಳಲಾಗಿದೆ. ಈ ಬಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್ ಹಾಕಲಾಗಿದೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಪಾನೀಯ ತಿಂಡಿ-ತಿನಸು ಹಂಚದಂತೆ ಮನವಿ ಮಾಡಲಾಗಿದೆ. ಗಣೇಶೋತ್ಸವ ಸಮಿತಿಯಿಂದ ಮುಸಲ್ಮಾನ ಸಮಾಜಕ್ಕೆ ಸೂಚನೆ ನೀಡಲಾಗಿದೆ.

ಇದೀಗ ಈ ಬಗ್ಗೆ ಮಸೀದಿಯೊಂದಕ್ಕೆ ಗಣೇಶೋತ್ಸವ ಆಯೋಜಕರು ಪತ್ರ ಬರೆದಿದ್ದಾರೆ. ಈ ಪತ್ರ ಬಾರಿ ವೈರಲ್​​ ಆಗಿದೆ. ಕಳೆದ ವರ್ಷ ಮುಸಲ್ಮಾನ್ ಸಮಾಜ ಭಾಂದವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ. ಇದಕ್ಕಾಗಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಗಣೇಶೋತ್ಸವ ವಿಚಾರವಾಗಿ ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದಿದ್ದಾರೆ. ಮುಸ್ಲಿಂ ಯುವಕರು ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ತಂಪು -ಪಾನೀಯ ಸಿಹಿ ತಿಂಡಿ ಹಂಚಿದ್ದರು. ಆದರೆ ತಂಪು ಪಾನೀಯ ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥವಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಎರಡು ಸಮಾಜಗಳ ನಡುವಿನ ಸಾಮರಸ್ಯ ಕೆಡುವ ಆತಂಕ ಉಂಟಾಗಿದೆ. ಈ ಹಿನ್ನಲೆ ಈ ಬಾರಿಯ ಮೆರವಣಿಗೆಯಲ್ಲಿ ಸಿಹಿ ತಿಂಡಿ ಹಂಚದಂತೆ ಸೂಚನೆ ನೀಡಲಾಗಿದೆ. ಪತ್ರದ ಮೂಲಕ ಗಣೇಶೋತ್ಸವ ಸಮಿತಿಯಿಂದ ಬೋಳಂತೂರು ಮಸೀದಿಗೆ ಮನವಿ ಮಾಡಲಾಗಿದೆ. ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಚರ್ಚೆಗೆ ಕಾರಣವಾಗಿದೆ.

ಹಲವು ವರ್ಷಗಳಿಂದ ಸೌಹಾರ್ದತೆಯ ಸಂಕೇತವಾಗಿ ಸಿಹಿತಿಂಡಿ ಹಂಚಿಕೆ ಮಾಡಲಾಗಿದೆ. ಸದ್ಯ ಗಣೇಶೋತ್ಸವ ಮುಗಿದ ಬೆನ್ನಲ್ಲೇ ಆಡಳಿತ ಮಂಡಳಿ ಪತ್ರ ವೈರಲ್ ಆಗಿದೆ.

By Suddi9

Leave a Reply

Your email address will not be published. Required fields are marked *