ಬಂಟ್ವಾಳ ಪುರಸಭೆಯ ನೂತನ ಉಪಾಧ್ಯಕ್ಷ ಮೂನಿಶ್ ಅಲಿ ಅಧಿಕಾರ ಸ್ವೀಕಾರ
ಬಂಟ್ವಾಳ: ಇಲ್ಲಿನ ಪುರಸಭೆಯ ಎರಡನೇ ಅವಧಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೂನಿಶ್ ಆಲಿಯವರು ಪುರಸಭೆಯ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಅವರು ನೂತನ ಉಪಾಧ್ಯಕ್ಷ ಮೊನೀಶ್ ಅಲಿಯವರಿಗೆ ಅಧಿಕಾರ ಹಸ್ತಾಂತರಿಸಿದರು.ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅವರು ಉಪಸ್ಥಿತರಿದ್ದು,ಶುಭಹಾರೈಸಿದರು.
ಎಸ್ ಕೆ ಎಸ್ ಎಸ್ ಎಫ್ ತಾಲೂಕು ಅಧ್ಯಕ್ಷರಾದ ಇರ್ಷಾದ್ ದಾರಿಮಿ, ಎಸ್ಎಸ್ಎಫ್ ಕರ್ನಾಟಕ ರಾಜ್ಯ ಮಾಧ್ಯಮ ಕಾರ್ಯದರ್ಶಿಯಾದ ಇರ್ಷಾದ್, ಬಂಟ್ವಾಳ ಜುಮಾ ಮಸೀದಿಯ ಖತೀಬರಾದ ಉಮರ್ ದಾರಿಮಿ ಆತೂರು,ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ, ಪಕ್ಷದ ಮುಖಂಡರಾದ ಅನ್ವರ್ ಸಾದತ್, ಶಾಹುಲ್ ಎಸ್ ಎಚ್, ಅಕ್ಬರ್ ಅಲಿ ಪೊನ್ನೋಡಿ, ಶಾಹುಲ್ ಪರ್ಲಿಯಾ, ಅಬ್ದುಲ್ ರಹಿಮಾನ್, ಅಬ್ದುಲ್ ಕಾದರ್ ಮಾಸ್ಟರ್, ಯೂಸುಫ್ ಆಲಡ್ಕ , ಅಕ್ಬರ್ ಬೆಳ್ತಂಗಡಿ, ನವಾಝ್ ಕಟ್ಟೆ, ಇಕ್ಬಾಲ್ ಜೆಟಿಟಿ, ಪುರಸಭಾ ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಇದ್ರೀಸ್ ಪಿ.ಜೆ, ಝೀನತ್ ಗೂಡಿನಬಳಿ, ಸಂಶಾದ್ ಗೂಡಿನಬಳಿ ಹಾಗೂ ಸಿಬ್ಬಂದಿಗಳು ಮತ್ತಿತರಿದ್ದರು.